ಗದಗ: ಬಸ್ ಹರಿದು ಸ್ಥಳದಲ್ಲೇ 31 ಕುರಿಗಳು ಮೃತಪಟ್ಟ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರ ಗ್ರಾಮದ ಬಳಿ ದಿಂಡೂರ ಕ್ರಾಸ್ ನಲ್ಲಿ ಇಂದು ಸಂಜೆ ನಡೆದಿದೆ.
ಗಜೇಂದ್ರಗಡ ದಿಂದ ಬದಾಮಿಗೆ ಹೊರಟಿದ್ದ ಕೆಎಸ್ ಆರ್ ಟಿಸಿ ಬಸ್ ಮಾರ್ಗ ಮಧ್ಯ ಇರುವ ದಿಂಡುರ ಕ್ರಾಸ್ ಬಳಿ ರಸ್ತೆ ಮೇಲೆ ಸಂಚರಿಸುತ್ತಿದ್ದ ಕುರಿಗಳ ಗುಂಪಿನ ಮೇಲೆ ಹಾಯ್ದ ಪರಿಣಾಮವಾಗಿ 31 ಕುರಿಗಳು ಸಾವನ್ನಪ್ಪಿವೆ.
ರೋಣ ತಾಲೂಕಿನ ಹಿರೇಹಾಳ ಗ್ರಾಮದ ಅಪ್ಪಣ್ಣ ಎಂಬುವವರಿಗೆ ಸೇರಿದ್ದ ಕುರಿಗಳು.
ಘಟನಾ ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.