ಗದಗ: ಇದೇ ಆಗಸ್ಟ್ 15 ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭವನ್ನು ವೀಕ್ಷಿಸಲು ಲಕ್‍ಪತಿ ದೀದಿ ಮತ್ತು ದ್ರೋಣ್ ದೀದಿಯರನ್ನು ವಿಶೇಷ ಅತಿಥಿಗಳನ್ನಾಗಿ ಕೇಂದ್ರ ಸರ್ಕಾರ ಆಹ್ವಾನಿಸಿದ್ದು ಈ ಪೈಕಿ ರಾಜ್ಯದ 11 ಜನರನ್ನು ಆಯ್ಕೆ ಮಾಡಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದ್ದಾರೆ ಗದಗ ಜಿಲ್ಲೆಯಿಂದ ಜಿಲ್ಲಾ ಪಂಚಾಯತ ಸಂಜೀವಿನಿ ವಿಭಾಗದ ಎನ್,ಆರ್,ಎಲ್,ಎಂ ಯೋಜನೆಯ ನರಗುಂದ ತಾಲೂಕಿನ ವಾಸನ ಗ್ರಾಮದ ಸಂಜೀವಿನಿ ಮಹಿಳಾ ಒಕ್ಕೂಟದ ಭೂಮಿಕಾ ರೈತ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯೆ ಅಕ್ಷತಾ ಆರ್ ಪಾಟೀಲ ಆಯ್ಕೆಯಾಗಿದ್ದಾರೆ.
ರಾಜ್ಯ ಸಂಜೀವಿನಿ-ಎನ್,ಆರ್,ಎಲ್,ಎಂ ಯೋಜನೆಯ ಸಹಯೋಗದೊಂದಿಗೆ ಖಾಸಗಿ ಕಂಪನಿಯಿಂದ ದ್ರೋಣ್ ನಿರ್ವಹಣೆ ವಿಷಯವಾಗಿ (ಹೊಲಗಳಲ್ಲಿ ಬೆಳೆದ ಬೆಳೆಗಳಿಗೆ ಡ್ರೋಣ ಮೂಲಕ ಸಿಂಪರಣೆ)ಕುರಿತ ತರಬೇತಿ ಪಡೆದು ಯಶಸ್ವಿಯಾಗಿ ದ್ರೋಣ್ ದೀದಿಯಾಗಿ ಕಾರ್ಯಚರಣೆ ಮಾಡುತ್ತಿರುವದರ ನಿಮಿತ್ಯ ಕರ್ನಾಟಕ ರಾಜ್ಯ ಸಂಜೀವಿನಿ- ಎನ್,ಆರ್,ಎಲ್,ಎಂ ಯೋಜನೆ ಅಭಿಯಾನ ನಿರ್ದೇಶಕರ ಕಛೇರಿಯಿಂದ ಆಯ್ಕೆಯಾಗಿರುತ್ತಾರೆ. ಶ್ರೀಮತಿ
ಅಕ್ಷತಾ ಪಾಟೀಲ ಆಯ್ಕೆಗೆ ಜಿಲ್ಲಾ ಪಂಚಾಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಭರತ್ ಎಸ್ ಹರ್ಷ ವ್ಯಕ್ತಪಡಿಸಿದ್ದಾರೆ.
