ಗದಗ: ಸಾಮಾಜಿಕ ಅರಣ್ಯ ಇಲಾಖೆ ಗದಗ ಉಪವಿಭಾಗಕ್ಕೆ ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಎಸ್.ಸಿ.ಎಫ್) ಪ್ರಕಾಶ ಪವಾಡಿಗೌಡ್ರ ಶನಿವಾರ ಅಧಿಕಾರ ಸ್ವೀಕರಿಸಿದರು. ಪದೋನ್ನತಿಯಿಂದ ತೆರವಾದ ಚಂದ್ರಹಾಸ್ ಡಿ. ವರ್ಣೇಕರ ಅವರ ಸ್ಥಾನಕ್ಕೆ ಪ್ರಕಾಶ ಪವಾಡಿಗೌಡ್ರ ಸೇವೆಗೆ ಹಾಜರಾದರು.
2021ರಲ್ಲಿ ಗದಗ ಜಿಲ್ಲೆಯ ರೋಣ ತಾಲ್ಲೂಕು ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಆ ನಂತರ ಕೊಪ್ಪಳ ಜಿಲ್ಲೆಯ ಮುನಿರಾಬಾದ ವಲಯ ಅರಣ್ಯಾಧಿಕಾರಿಯಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದಾರೆ.
ರೋಣ ವಲಯದಲ್ಲಿ ಸೇವೆ ಸಲ್ಲಿಸುವಾಗ ಸಾಮಾಜಿಕ ಅರಣ್ಯ ಇಲಾಖೆಯ ರೋಣ ಭಾಗದ ಸಿಬ್ಬಂದಿಗಳ ಸಹಕಾರದಲ್ಲಿ ಹಾಗೂ ನರೇಗಾ ಕಾರ್ಮಿಕರ ಸಹಕಾರದಲ್ಲಿ ವರ್ಷಕ್ಕೆ 40-50 ಕಿಮೀ ವರೆಗೆ ರಸ್ತೆ ಬದಿಯ ಎರಡು ಭಾಗಕ್ಕೆ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಿದರು ಇದಕ್ಕೆ ಜನರು ಮೆಚ್ಚುಗೆಯನ್ನು ಪಡೆದಿದ್ದರು. ಇಂದು ರೋಣ ಹಾಗೂ ಗಜೇಂದ್ರಗಡ ತಾಲ್ಲೂಕಾ ವ್ಯಾಪ್ತಿಯ ವಿವಿಧ ಹಳ್ಳಿಗಳಿಗೆ ಹೋಗುವ 160 ಕಿಮೀ ನಷ್ಟು ದೂರದ ವರೆಗೆ ಗಿಡಗಳು ಬೆಳೆದು ನಿಂತಿವೆ ಮತ್ತು ನೆರಳು ಹಣ್ಣುಗಳನ್ನು ನೀಡುತ್ತಿವೆ. ರಸ್ತೆ ಅಗಲಿಕರಣ ಕಾರಣದಿಂದ ಬೇವಿನಕಟ್ಟಿ ಕ್ರಾಸ್ ನಿಂದ ಗಜೇಂದ್ರಗಡ ಮಾರ್ಗದ ಕಡೆ 900 ಸಸಿಗಳನ್ನು ಬೇರು ಸಮೇತ ಕಿತ್ತು ಮರಳಿ ಬೇರೆ ಜಾಗದಲ್ಲಿ ಬೆಳೆಸಿ ಸಾಹಸ ಮೆರೆದರು. ಹೀಗೆ ಅನೇಕ ಉತ್ತಮ ಕಾರ್ಯಗಳನ್ನು ಆಗಿನ ಸಂದರ್ಭದಲ್ಲಿ ಮಾಡಿದ್ದರು.
ಈಗ ಪದೋನ್ನತಿ ಹೊಂದಿ ಕೊಪ್ಪಳ ಜಿಲ್ಲೆಯಿಂದ ಮರಳಿ ಗದಗ ಜಿಲ್ಲೆಗೆ ಬಂದಿರುವುದು ನೀರಿಕ್ಷೆಗಳನ್ನು ಹೆಚ್ಚಿಸಿದೆ. ಅದರಲ್ಲೂ ಗ್ರಾಮೀಣ ಭಾಗದ ಅರಣ್ಯ ಪ್ರದೇಶಗಳ ಹಾಗೂ ಗಿಡಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ರಸ್ತೆ ಬದಿಯಲ್ಲಿ, ಹೊಲದಲ್ಲಿ, ಗೌಂಟಾನ ಜಾಗದಲ್ಲಿ, ಕೊರಚಲು ಪ್ರದೇಶದಲ್ಲಿ ಗಿಡಗಳನ್ನು ನೆಡುವಾಗ ರೈತರಿಗೆ ಮನವೋಲಿಸುವ ಗ್ರಾಮಸ್ಥರನ್ನು ಪ್ರೇರೆಪಿಸುವ ಹಾಗೂ ಪರಿಸರದ ಕುರಿತು ತಿಳುವಳಿಕೆ ನೀಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಒಟ್ಟಾರೆ ಗದಗ ಅರಣ್ಯದ ಉಳುವಿಗೆ ಹಾಗೂ ಹೆಚ್ಚಿನಮಟ್ಟದಲ್ಲಿ ವೀಸ್ತರಣೆಗೆ ಅಧಿಕಾರಿಗಳ, ಸಿಬ್ಬಂದಿಗಳ ಹಾಗೂ ಜನರ ಸಹಕಾರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅಧಿಕಾರ ಸ್ವೀಕರಿಸಿದ ನಂತರ ಎಸ್.ಸಿ.ಎಫ್ ಪ್ರಕಾಶ ಪವಾಡಿಗೌಡ್ರ ಹೇಳಿದರು.