ಗದಗ : ನಿವೃತ್ತ ಜಿಲ್ಲಾ ನ್ಯಾಯಧೀಶರು ಮತ್ತು ಜಿಲ್ಲಾಧಿಕಾರಿಗಳ ಕಛೇರಿಯ ಕಾನೂನು ಸಲಹೆಗಾರರಾದ ಎಸ್,ಜಿ,ಪಲ್ಲೇದ ಅವರು ಕನ್ನಡ ಗ್ರಂಥಾಲಯಕ್ಕೆ 600 ಕ್ಕೂ ಹೆಚ್ಚು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಸೋಮವಾರದಂದು ಅವರು ವಿದ್ಯಾಭ್ಯಾಸ ಮಾಡಿದ ಪ್ರತಿಷ್ಟಿತ ಕೆ.ಎಲ್.ಇ. ಸಂಸ್ಥೆಯ ಜೆ.ಟಿ.ಕಾಲೇಜಿಗೆ ಪುಸ್ತಕಗಳನ್ನು ದಾನವಾಗಿ ನೀಡಿದರು. ಅಖಂಡ 30ವರ್ಷಗಳ ನ್ಯಾಂಯಾಗ ಸೇವೆಯ ಅವಧಿಯಲ್ಲಿ ಹಾಗು ಜಿಲ್ಲಾ ಗ್ರಾಹಕರ ವೇದಿಕೆಯ ಅಧ್ಯಕ್ಷರಾಗಿ ಎಲ್ಲಾ ತಿರ್ಪುಗಳನ್ನು ಕನ್ನಡದಲ್ಲಿಯೇ ನೀಡಿದ್ದು ವಿಶೇಷ.
ಕನ್ನಡ ಭಾಷೆ ಸಂಸ್ಕೃತಿ ಪುಸ್ತಕ ಬಗ್ಗೆ ಅಪಾರ ಅಭಿಮಾನ ಆಸಕ್ತಿ ಹೊಂದಿ ತಮ್ಮ ಸೇವಾ ಅವಧಿಯಲ್ಲಿ ಸಂಗ್ರಹಿಸಿದ ಮೌಲಿಕ ಕನ್ನಡ ಗ್ರಂಥಗಳು ಮುಂದಿನ ಯುವ ಜನಾಂಗದವರಲ್ಲಿ ಕನ್ನಡ ಭಾಷೆ ಸಂಸ್ಕೃತಿ ನಾಡಿನ ಬಗ್ಗೆ ಅಭಿಮಾನ ಜೊತೆಗೆ ಓದುವ ಹವ್ಯಾಸ ರೂಡಿಸಿಕೊಳ್ಳಲೆಂದು ತಾವು ಸಂಗ್ರಹಿಸಿದ ಪುಸ್ತಕಗಳನ್ನು ದಾನವಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗದಗ ಜಿಲ್ಲೆಯ ಕ.ಸಾ.ಪ. ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ್,ಜಿ.ಬಿ.ಪಾಟೀಲ್, ವಿಶ್ವನಾಥ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.