ಗದಗ: ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 67ಯಲ್ಲಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ನಡೆದಿದ್ದು ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ ಹೆದ್ದಾರಿ ದಾಟೋ ವೇಳೆ ಈ ದುರ್ಘಟನೆ ನಡೆದಿದೆ.
ಹಳ್ಳಿಗುಡಿ ಗ್ರಾಮದ ಪರಸಪ್ಪ ಜೋಗಿನ್ (52), ಪೇಟಾಲೂರ ಗ್ರಾಮದ ಮಾರುತಿ (44) ಅಪಘಾತದಲ್ಲಿ ಮೃತ ದುರ್ದೈವಿಗಳಾಗಿದ್ದು.
ಹೊಲದಲ್ಲಿ ಬಿತ್ತನೆಗಾಗಿ ಹೆಸರು ಬೀಜ ತೆಗೆದುಕೊಂಡು ಹಳ್ಳಿಗುಡಿ ಗ್ರಾಮಕ್ಕೆ ತೆರಳೋ ವೇಳೆ ಈ ಘಟನೆ ನಡೆದಿದ್ದು ಕೊಪ್ಪಳದಿಂದ ಗದಗ ಕಡೆ ತೆರಳುತ್ತಿದ್ದ ಬಸ್ ಈ ಸಮಯದಲ್ಲಿ ಬೈಕ ಸವಾರರು ಹೆದ್ದಾರಿ ದಾಟುತ್ತಿದ್ದಾಗ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಮುಂಡರಗಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.