ಗದಗ: ಹುಬ್ಬಳ್ಳಿಯ ಬಿಡಿಕೆ ಸ್ಪೋರ್ಟ್ಸ್ ಫೌಂಡೇಶನ್ ಆಶ್ರಯ ನಡೆಯುತ್ತಿರುವ ಹುಬ್ಬಳ್ಳಿ ಪ್ರೀಮಿಯರ್ ಲೀಗ್ ಜೂನಿಯರ್ 5 ನೇ ಆವೃತ್ತಿಯ ಮೊದಲ ಕ್ರಿಕೆಟ್ ಪಂದ್ಯದಲ್ಲಿ ನಮ್ಮ ಸಿಡಿಎಂ ಜೆಮ್ಸ್ ಹುಬ್ಬಳ್ಳಿ ವಿರುದ್ಧ ನಮ್ಮ ಗದಗ ಕ್ರಿಕೆಟರ್ಸ್ ತಂಡ 7 ವಿಕೆಟ್‌ಗಳ ಜಯಗಳಿಸಿದೆ.
ಟಾಸ್ ಗೆದ್ದ ನಮ್ಮ ಗದಗ ಕ್ರಿಕೆಟರ್ಸ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು ಸಿಡಿಎಂ ಜೆಮ್ಸ್ ತಂಡ 20.3 ಓವರ್‌ಗಳಲ್ಲಿ 68/10 ಕ್ಕೆ ಆಲ್ ಜೌಟ್ ಗಿ ಆದರು.
ನಮ್ಮ ಗದಗ ಕ್ರಿಕೆಟರ್ಸ್ ತಂಡದ ಬೌಲರ್‌ಗಳಾದ ಹರ್ಷ ಶಂಕೆ, ಸ್ವರೂಪ ಸೋಲಂಕಿ ಪ್ರೀತಂ ಸುಂಕಾಪುರ ಬೌಲಿಂಗ್ ದಾಳಿಯಲ್ಲಿ ಮೇಲುಗೈ ಸಾಧಿಸಿದ ಬೌಲರ್‌ಗಳು.
ಪ್ರತಿಯಾಗಿ ನಮ್ಮ ಗದಗ ಕ್ರಿಕೆಟಿಗರು 18.5 ಓವರ್‌ಗಳಲ್ಲಿ 71/3 ಗಳಿಸಿದರು ಆರಂಭಿಕರಾಗಿ ಮೊಯಿನ್ ಮುಲ್ಲಾ, ಮತ್ತು ಪ್ರಸಾದ್ ಉಣ್ಣಿಮಠ ಅವರು 40 ರನ್‌ಗಳ ಜೊತೆಯಾಟ ಆಡಿದರು ಪ್ರಸಾದ್ 23 ರನ್‌ಗಳ ಉತ್ತಮ ಇನ್ನಿಂಗ್ಸ್‌ಗಳನ್ನು ಗಳಿಸಿದರು. ನಮ್ಮ ಗದಗ ಕ್ರಿಕೆಟರ್ಸ್‌ನ ಹರ್ಷ ಶಂಕೆ ನಾಯಕ ವಿಕೆಟ್‌ಗೆ ನಿಜವಾಗಿಯೂ ಉತ್ತಮವಾಗಿ ಬೌಲಿಂಗ್ ಮಾಡಿ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ನಮ್ಮ ಗದಗ ಕ್ರಿಕೆಟರ್ಸ್ ತಂಡದಲ್ಲಿ ಪ್ರೀತಂ ಸುಂಕಾಪೂರ, ಸ್ವರೂಪ ಸಚಿನ್, ಆರುಷ್ ಪುಥಾರಣ, ಮನೀಷ್ ನರನುರ, ಕ್ರಧನ್ ಕುಲಕರ್ಣಿ, ಆರ್ಯನ್ ಮೆರವಾಡೆ, ಸಂಕೇತ ಕುಷ್ಟಗಿ, ಅಮೂಲ್ ಸಂತೋಷ, ಆರ್ಯನ್ ಪಿ, ಬೆನಕಾ ಹೊಸಮನಿ, ಚಂದ್ರಣ್ಣ ಮನಗುಂಡಿ, ನಿತಿನ್ ಬದಿ, ಪ್ರಸಾದ ಉನ್ನಿಮಠ, ಸಮರ್ಥ ನುಗ್ಗಿಕೇರಿ, ಸುಜಲ್ ಬಸಂತಿ, ಹರ್ಷಾ ಶಾಂಕೆ, ಮೊಹ್ಮದಮೊಯಿನ್ ಮುಲ್ಲಾ ಭಾಗವಹಿಸಿದ್ದರು.
ಬಿಸಿಸಿಐ ಲೆವೆಲ್-1 ಅಂಪೈರ್ ಹಾಗೂ ಬಿಸಿಸಿಐನ ಲೆವೆಲ್-ಓ ಕೋಚ್ ಆಗಿರುವ, ಮಲ್ಲಿಕಾರ್ಜುನ ಭೂಪಾನಿ ಸೇರಿದಂತೆ ಜಾನೋಪಂತರ ಕ್ರಿಕೆಟ್ ಅಕಾಡೆಮಿಯ ಹಿರಿಯ ಕ್ರಿಕೆಟ್ ಪಟು ವೀರಣ್ಣ ಜಾನೋಪಂತರ , ಮಂಜುನಾಥ ಕಾಳೆ, ಶಿವಕುಮಾರ ಕುಷ್ಟಗಿ ಕ್ರೀಡಾಂಗಣದಲ್ಲಿ ಹಾಜರಿದ್ದರು.