ಎಸ್ ಎಸ್ ಎಲ್‌ಸಿ ಫಲಿತಾಂಶ: ಬಾಗಲಕೋಟೆಯ ಕು.ಅಂಕಿತಾ ರಾಜ್ಯಕ್ಕೆ ಪ್ರಥಮ, ಗ್ರಾಮೀಣ ವಿದ್ಯಾರ್ಥಿಗಳೆ ಮೇಲುಗೈ

ಸಮಗ್ರ ಪ್ರಭ ಸುದ್ದಿ
1 Min Read

ಬೆಂಗಳೂರು: 2023-24ನೇ ಸಾಲಿನ 8.69 ಲಕ್ಷ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು 6,31,204 ವಿದ್ಯಾರ್ಥಿಗಳು ಈ ಬಾರಿ ಎಸ್.ಎಸ್.ಎಲ್.ಸಿ ಯಲ್ಲಿ ತೇರ್ಗಡೆಯಾಗಿ ಒಟ್ಟು 73.40 ರಷ್ಟು ಒಟ್ಟು ಫಲಿತಾಂಶ ಹೊರಬಿದ್ದಿದೆ.

ಈ ಬಾರಿ ಕೂಡ ಹೆಣ್ಣು ಮಕ್ಕಳೇ ಮೇಲು ಕೈ ಸಾಧಿಸಿದ್ದು ಉಡುಪಿ ರಾಜ್ಯದಲ್ಲಿ ಮೊದಲ ಸ್ಥಾನ(94%),
ದಕ್ಷಿಣ ಕನ್ನಡ ದ್ವೀತಿಯ ಸ್ಥಾನ(92.12%),ಶಿವಮೊಗ್ಗ ತೃತೀಯ ಸ್ಥಾನ (88.67%) ಯಾದಗಿರಿ ಕೊನೆಯ ಸ್ಥಾನ(50.59%)

ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳ ವಿವಿರ:

1)ಅಂಕಿತಾ ಬಸಪ್ಪ ಕೊನ್ನೂರು ( ಬಾಗಲಕೋಟೆ) 625/625 (ರಾಜ್ಯಕ್ಕೆ ಫ್ರಥಮ)

ದ್ವೀತಿಯ ಸ್ಥಾನ:-
2)ಮೇದಾ ಪಿ ಶೆಟ್ಟಿ ( ಬೆಂಗಳೂರು) 624/625
2) ಹರ್ಷಿತಾ ಡಿಎಂ (ಮಧುಗಿರಿ)
2)ಚಿನ್ಮಯ್ (ದಕ್ಷಿಣ ಕನ್ನಡ)
2)ಸಿದ್ದಾಂತ್ (ಚಿಕ್ಕೊಡಿ )
2)ದರ್ಶನ್ (ಶಿರಸಿ)
2) ಚಿನ್ಮಯ್ (ಶಿರಸಿ)
2)ಶ್ರೀರಾಮ್ (ಶಿರಸಿ)
7 ಜನರಿಗೆ ದ್ವೀತಿಯ ಸ್ಥಾನ

ರಾಜ್ಯದ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ ಕಂಡಿದೆ 2022-23ರಲ್ಲಿ 83.89% ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದರು 2023-24 ನೇ ಸಾಲಿನಲ್ಲ ಈ 73.40% ಉತ್ತೀರ್ಣರಾಗುವ ಮೂಲಕ ಶೇಕಡಾ 10.49% ರಷ್ಟು ಫಲಿತಾಂಶ ಕುಸಿತ ಕಂಡಿದೆ.

ಈ ಬಾರಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಮೇಲುಗೈ ಸಾಧಿಸಿದ್ದು ನಗರ ಪ್ರದೇಶ 3.59 ಲಕ್ಷ ಮಂದಿ 72.83%, ಗ್ರಾಮೀಣ 2.71 ಲಕ್ಷ , 74.17% ಶೇಕಡಾ ವಾರು ಗಳಿಸಿದ್ದಾರೆ.

Share this Article