ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದ ಹೊರವಲಯದಲ್ಲಿ ತಡ ರಾತ್ರಿ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಯುವಕನೋರ್ವನ ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಹತ್ಯೆಯಾಗಿರುವ ಯುವಕ ಸುಭಾಸ ನಾಯಕನು ಕೊಪ್ಪಳ ಜಿಲ್ಲೆಯ ಹ್ಯೆದರ ನಗರ ತಾಂಡಾದ ನಿವಾಸಿ ಎಂದು ಗುರುತಿಸಲಾಗಿದ್ದು ಬುಧವಾರ ರಾತ್ರಿ ಮುಂಡರಗಿ ಹೊರವಲಯದ ಹೌಸೀಂಗ್ ಬೋರ್ಡ್ ನ ಕಾಲೋನಿಯ ಬಯಲಿನಲ್ಲಿ ಇಬ್ಬರು ಗೆಳೆಯರ ಜೊತೆಗೆ ಕೂಡಿಕೊಂಡು ಪಾರ್ಟಿ ಮಾಡಿದ್ದರು ಬುಧವಾರ ತಡರಾತ್ರಿ ಸುಭಾಸ ನಾಯಕನನ್ನು ಬೀಯರ್ ಬಾಟಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ.
ಸುಭಾಸ ನಾಯಕ ಜೊತೆ ಗೆಳೆಯರು ತಾಂಡಾಕ್ಕೆ ಹೋಗಿ ಹತ್ಯೆಯ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.
ಮುಂಡರಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.