ಗದಗ: ಟಿಪ್ಪರ ಮತ್ತು ಪೋಲಿಸ್ ಬೈಕ್ ನಡುವೆ ತಡ ರಾತ್ರಿ ಅಪಘಾತ ಸಂಭವಿಸಿದ್ದು ಪೊಲೀಸ್ ಪೇದೆ ಕಾಲಿಗೆ ಗಂಭೀರ ಗಾಯಗಳಾದ ಘಟನೆ ನಗರದ ಬೆಟಗೇರಿ ರೈಲ್ವೇ ಅಂಡರ್ ಬ್ರಿಜ್ ಬಳಿ ಬುಧವಾರ ತಡ ರಾತ್ರಿ ನಡೆದಿದೆ.
ವೀರಯ್ಯ ಹಿರೇಮಠ (54) ಗಂಭಿರ ಗಾಯಗೊಂಡ ಪೊಲೀಸ್ ಪೇದೆಯಾಗಿದ್ದು ಎಡಗಾಲಿಗೆ ಗಂಭೀರ ಗಾಯವಾಗಿ ಪ್ರಥಮ ಚಿಕಿತ್ಸೆ ನೀಡಿ ಧಾರವಾಡದ ಎಸ್ ಡಿಎಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತದಲ್ಲಿ ನುಜ್ಜುಗುಜ್ಜಾದ ಪೊಲೀಸ್ ಇಲಾಖೆ ದ್ವಿಚಕ್ರ ವಾಹನ ಪೇದೆ ವೀರಯ್ಯ ಬೆಟಗೇರಿಯಿಂದ ಗದಗ ಕಡೆ ಬರ್ತಿದ್ದಾಗ ದುರ್ಘಟನೆ ನಡೆದಿದ್ದು ಟಿಪ್ಪರ ಚಾಲಕ ಅತಿಯಾಗಿ ವೇಗದಿಂದ ಚಾಲನೆ ಮಾಡಿದ ಪರಿಣಾಮವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಅಪಘಾತ ಸ್ಥಳದಲ್ಲಿ ಟಿಪ್ಪರ್ ನಿಲ್ಲಿಸದೇ ಪಂಚಾಕ್ಷರಿ ನಗರದ ಬಳಿ ಟಿಪ್ಪರ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ.
ಗದಗ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.