ಬಳ್ಳಾರಿ: ಖಾಸಗಿ ಲೇಜೌಟಗೆ ಪರವಾನಿಗೆಗೆ ಕೊಡಲು ಲಂಚ ಸ್ವೀಕರಿಸುವ ವೇಳೆಯಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಪೌರಾಯುಕ್ತ ರಮೇಶ ವಟಗಲ ಸೇರಿದಂತೆ ಕಛೇರಿಯ ಬಹುತೇಕ ಸಿಬ್ಬಂದಿಯನ್ನು ಲಂಚದ ಸಮೇತವಾಗಿ ಲಕ್ಷ ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಬಳ್ಳಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲಕ್ಷ ಲಕ್ಷ ಹಣ ಲಂಚ ಸ್ವೀಕರಿಸುತ್ತಿದ್ದ ಆರು ಭ್ರಷ್ಟ ಅಧಿಕಾರಿಗಳನ್ನ ಕೆಡ್ಡಕ್ಕೆ ಕೆಡವಿದ ಲೋಕಾಯುಕ್ತ ಅಧಿಕಾರಿಗಳು.
ಕೇಸ್ ವರ್ಕರ್ ನಿಂದ ಹಿಡಿದು ಕಮೀಷನರ್ ವರೆಗೂ ಲಂಚ ಪಡೆದಿದ್ದ ಬುಡ ಅಧಿಕಾರಿಗಳು.
ವೀರೇಶ ಎನ್ನುವರ 20 ಎಕರೆ ಭೂಮಿಗೆ ಲೇಜೌಟ ಅನುಮತಿ ನೀಡಲು ಬುಡ ಪ್ರಾಧಿಕಾರದ ಪೌರಾಯುಕ್ತ ರಮೇಶ್ ವಟಗಲ್ಲ ಸೇರಿದಂತೆ ಆರು ಜನ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
೧. ಬುಡ ಕಮಿಷನರ್ ರಮೇಶ್ ವಟಗಲ್ 5 ಲಕ್ಷ ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ.
೨. ಇನ್ನು 6 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬುಡ ಟೌನ್ ಪ್ಲಾನಿಂಗ್ ಮೆಂಬರ್ ಕಲ್ಲಿನಾಥ್ ಲೋಕಾಯುಕ್ತದಿಂದ ಅರೆಸ್ಟ್.
೩. 3 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ ಅಸಿಸ್ಟೆಂಟ್ ಟೌನ್ ಪ್ಲಾನರ್ ಯಶಸ್ವಿನಿ ಬಂಧನ.
೪. ಪೋನ್ ಪೇ ಮೂಲಕ 10 ಸಾವಿರ ಲಂಚ ಪಡೆದಿದ್ದ ಬುಡ ಮ್ಯಾನೇಜರ್ ನಾರಾಯಣ ಬಂಧನ.
೫. 20 ಸಾವಿರ ಲಂಚ ಪಡೆದಿದ್ದ ಕೇಸ್ ವರ್ಕರ್ ಶಂಕರ್ ಬಂಧನ.
೬. ಪೋನ್ ಪೇ ಮೂಲಕ 20 ಸಾವಿರ ಲಂಚ ಪಡೆದಿದ್ದ ಬುಡ ಜೂನಿಯರ್ ಇಂಜಿನಿಯರ್ ಕಾಜಾ ಹುಸೇನ್ ಬಂಧನ.
ದಾಳಿಯಲ್ಲಿ ಲೋಕಾಯುಕ್ತ ಎಸ್ಪಿ ಸಿದ್ದರಾಜು,ಡಿವೈಎಸ್ಪಿ ವಸಂತ ಕುಮಾರ ನೇತೃತ್ವದಲ್ಲಿ ದಾಳಿ ನಡೆದಿದೆ.