ಗದಗ: ಜಿಲ್ಲೆ ಡಂಬಳ ಗ್ರಾಮದ ಹೊರವಲಯದ ಜಮೀನು ಒಂದರ ಮರದ ಕೆಳಗೆ ಕೊಲೆ ಮಾಡಿ ಮರಕ್ಕೆ ನೇತುಹಾಕಿ ಕಾಂಗ್ರೆಸ್ ಕಾರ್ಯಕರ್ತನ ಕೊಲೆ ಮಾಡಿದ ಘಟನೆ ನಡೆದಿದೆ.
ಶರಣು ಸಂದೀಗೌಡರ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದ್ದು
ಕೊಲೆಗೂ ಮುನ್ನ ಶರಣು ಸಂದೀಗೌಡರ್ ನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಕಣ್ಣಿಗೆ ಕಾರದ ಪುಡಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮರಕ್ಕೆ ಹಗ್ಗದಿಂದ ಕಟ್ಟಿ ಹಾಕಿ ವಿಕೃತಿ ಮೆರೆದ ದುಷ್ಕರ್ಮಿಗಳು ಆದರೆ ಕೊಲೆಗೆ ನಿಕರವಾದ ಕಾರಣ ತಿಳಿದುಬಂದಿಲ್ಲ.
ಡೋಣಿ ಗ್ರಾಮದ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಪ್ರಮುಖನಾಗಿದ್ದ ಕೊಲೆಯಾದ ಶರಣಪ್ಪ ಕೊಲೆಯ ಸ್ವರೂಪ ನೋಡಿ ಬೆಚ್ಚಿಬಿದ್ದ ಡೋಣಿ, ಡಂಬಳ ಗ್ರಾಮಸ್ಥರು ಸ್ಥಳಕ್ಕೆ ಮುಂಡರಗಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.