ನಿಷೇಧಿತ ಗಾಳಿಪಟ ಮಾಂಜಾ ದಾರ ಬಳಕೆ ಬೇಡ: ಜಿಲ್ಲಾಡಳಿತ ಸೂಚನೆ

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ಗಾಳಿಪಟ ಹಾರಿಸಲು ಬಳಕೆ ಮಾಡುವ ಮಾಂಜಾ ದಾರವನ್ನು (Manja Thread) ನಿಷೇಧಿಸಲಾಗಿದೆ. ಜಿಲ್ಲಾಧ್ಯಂತ ಅಪಾಯಕಾರಿ ಮಾಂಜಾ ದಾರ ಮಾರಾಟ, ಬಳಕೆ ಮಾಡಬಾರದು. ಫ್ಯಾನ್ಸಿ ಸ್ಟೋರ್‌ಗಳು, ಸಣ್ಣಪುಟ್ಟ ಗುಡಂಗಡಿಗಳಲ್ಲಿ ಈ ದಾರ ಮಾರಾಟಬೇಡ.

ಗಾಳಿಪಟ ಹಾರಾಟಕ್ಕೆ ಬಳಕೆ ಮಾಡುವ ಮಾಂಜಾ ದಾರವು ಪ್ರಾಣಿ-ಪಕ್ಷಿಗಳು ಮಾತ್ರವಲ್ಲದೆ ಮನುಷ್ಯರ ಪ್ರಾಣಕ್ಕೂ ಕಂಟಕವಾಗಿವೆ. ನಗರದ ರಸ್ತೆಯಲ್ಲಿ ಹರಿತವಾದ ಗಾಳಿಪಟ ದಾರದಿಂದ ಬೈಕ್ ಸವಾರರು, ಪಾದಚಾರಿಗಳ ಕಾಲು, ಕೈಗೆ ಗಾಯವಾಗುತ್ತಿವೆ.

ಮಾಂಜಾ ದಾರ ಮಾರಾಟ, ಬಳಕೆ ಮಾಡುವುದು ಕಂಡು ಬಂದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಕಠಿಣ ಕಾನೂನು ಕ್ರಮ ಜರುಗಿಸಲಾಗುವು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ. ಎಲ್‌. ಅವರು ತಿಳಿಸಿದ್ದಾರೆ.

ನೀಷೇದ ಆದೇಶ ಹೊರಡಿಸಿದ್ದ ಸರ್ಕಾರ

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ತೀರ್ಪಿನಂತೆ ರಾಜ್ಯ ಸರಕಾರ 2017 ರಲ್ಲಿ ಮಾಂಜಾ ದಾರದ ತಯಾರಿಕೆ, ಬಳಕೆ, ಮಾರಾಟವನ್ನು ನಿಷೇಧಿಸಿ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.

TAGGED:
Share this Article