ರೋಣ: ವಿಜ್ಞಾನವೆನ್ನುವುದು ಕೇವಲ ಒಂದು ವಿಷಯವಲ್ಲ ಅದು ಜೀವನದ ವಿಧಾನವೇ ಆಗಿದೆ ಎಂದು ಡಿ ಪೌಲ್ ಅಕ್ಯಾಡೆಮಿಯ ಫಾದರ್.ಸಿಜೋ ಥೋಮಸ್ ಹೇಳಿದರು.
ಅವರು ಇಂದು ರೋಣ ನಗರದಲ್ಲಿ ಡಿ ಪೌಲ್ ಅಕ್ಯಾಡೆಮಿಯಲ್ಲಿ ಹಮ್ಮಿಕೊಳ್ಳಲಾದ ವಿಜ್ಞಾನ ವಸ್ತಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿ ವಿಜ್ಞಾನವು ವಿದ್ಯಾರ್ಥಿಗಳಲ್ಲಿ ಕೌತುಕತೆ ಉತ್ಸಾಹವನ್ನು ಬೆಳೆಸುವುದರ ಮೂಲಕ ವಿದ್ಯಾರ್ಥಿಯ ವಿಶ್ಲೇಷಣಾತ್ಮಕ ಮನೋಭಾವವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು ಮುಂಬರುವ ದಿನಗಳಲ್ಲಿ ಈ ಶಾಲೆಯು ಯಾವುದಾದರೂ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ವಂತಹ ವಿಜ್ಞಾನಿಗಳಾಗಬೇಕು ಆ ದೆಸೆಯಲ್ಲಿ ಪ್ರತಿದಿನವೂ ವೈಜ್ಞಾನಿಕ ವಿಷಯಗಳ ಕುರಿತು ಗಮನ ಹರಿಸುತ್ತಿರಬೇಕು ಎಂದು ಹೇಳಿದರು.
ಡಿ.ಪೌಲ್ ಶಾಲೆಯ ನಿರ್ದೇಶಕರಾದ ಫಾದರ್. ಜೋಮೇಶ್ ಜೋನ್ ವಿ.ಸಿ ಪಾಲ್ಗೊಂಡು ವಿಜ್ಞಾನವು ಹೇಗೆ? ಏಕೆ? ಎಂಬ ವಿದ್ಯಾರ್ಥಿಯ ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ ಎಂದು ಹೇಳಿದರು.
ವೇದಿಕೆಯ ಮೇಲೆ ಶಾಲೆಯ ಪ್ರಾಚಾರ್ಯರಾದ ಅಜೋಶ ಜೋಶ ಆಡಳಿತಾಧಿಕಾರಿಗಳಾದ ಫಾದರ್.ಬೇಬಿನ್ ಥಾಮಸ್ ವಿ.ಸಿ ಉಪಸ್ಥಿತರಿದ್ದರು ವಿದ್ಯಾರ್ಥಿಗಳು ವಿವಿಧ ರೀತಿಯ ಮಾಡ್ಯೂಲ್ಗಳು,ಚಾರ್ಟ್ ಗಳು,ಪ್ರಾಯೋಗಿಕ ಸಾಧನಗಳ ಮೂಲಕ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದರು ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ವಿಜ್ಞಾನ ವಿಷಯದ ಶಿಕ್ಷಕರಾದ ಶ್ರೀ.ಶಿವಾನಂದ ಬಾಬಣ್ಣವರ ಹಾಗೂ ಕುಮಾರಿ ಅರ್ಪಿತಾ ಮೇಟಿಯವರು ಪರಿವಿಕ್ಷಕರಾಗಿ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ವಿಜ್ಞಾನ ವಿಷಯದ ಹಿರಿಯ ಶಿಕ್ಷಕರಾದ ಶ್ರೀ.ಯಲಪ್ಪ ವಾಲ್ಮೀಕಿ ಎಲ್ಲರನ್ನೂ ಸ್ವಾಗತಸಿದರೆ ಶಾಲೆಯ ಪ್ರದಾನ ಮಂತ್ರಿ (ವಿದ್ಯಾರ್ಥಿ) ಕುಮಾರ.ಅಬ್ರಾರ ಬೆಟಗೇರಿ ನಿರೂಪಿಸಿ ವಂದಿಸಿದರು.