ಗದಗ: ಸೋಮು ಸೌಂಡ್ ಇಂಜನೀಯರ್ ಚಲನಚಿತ್ರ ಉತ್ತರ ಕರ್ನಾಟಕ ಪ್ರತಿಭೆಗಳ ಜೊತೆಗೆ ಉ. ಕರ್ನಾಟಕದಲ್ಲೆ ಚಿತ್ರಿಕರಣಗೊಂಡಿದೆ. ಮಾರ್ಚ್ 15ರಂದು ಈ ಚಿತ್ರ ಬಿಡುಗಡೆ ಆಗಲಿದ್ದು, ಎಲ್ಲ ಅಭಿಮಾನಿಗಳು ಸಿನಿಮಾ ಥೇಯಟರ್ ನಲ್ಲೆ ಹೋಗಿ ನೋಡಿ ಎಂದು ಚಿತ್ರದ ನಾಯಕ ನಟ ಅಭಿ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಗಜ್ಯೋತಿ ಶ್ರೀ ಬಸವೇಶ್ವರರ ನಾಡು ಕೂಡಲಸಂಗಮ ಹಾಗೂ ಗಂಜಿಹಾಳದಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ. ಉತ್ತರ ಕರ್ನಾಟಕದ ಕಲಾವಿದರು ಇಲ್ಲಿ ಅಭಿನಯಿಸಿದ್ದು, ಇದು ನಮ್ಮ ಭಾಗದ ಚಿತ್ರ ಆಗಿರುವುದರಿಂದ ಅಭಿಮಾನಿಗಳು ಹರಸಿ ಹಾರೈಸಬೇಕು. ಚಿತ್ರವು ಕೌಟುಂಬಿಕ ಹಾಗೂ ಭಾವನಾತ್ಮಕ ಸಂಬಂಧಗಳನ್ನು ಒಳಗೊಂಡಿದೆ. ನಾಲ್ಕು ಹಾಡುಗಳನ್ನು ಒಳಗೊಂಡಿದೆ. ಜೊತೆಗೆ, ಎರಡು ಭಜನಾ ಪದಗಳನ್ನು ಅಳವಡಿಸಲಾಗಿದೆ. ಖ್ಯಾತ ಭಜನಾ ಗಾಯಕ ಆಕಾಶ ಮನಗೋಳಿ ಅವರು ಸ್ವತಃ ಈ ಚಿತ್ರದಲ್ಲಿ ಭಜನೆ ಹಾಡುಗಳನ್ನು ಹಾಡಿದ್ದಾರೆ. ನಮಗೆ ಗೋತ್ತಿಲದೇ ಮಾಡಿರುವ ತಪ್ಪುಗಳನ್ನು ಕ್ಷಮಿಸಬೇಕು ಎನ್ನುವ ಸಂದೇಶ ಈ ಚಿತ್ರ ಒಳಗೊಂಡಿದೆ. ದ್ವೇಷ ಬಿಟ್ಟು ಪ್ರೀತಿ ಮಾಡಿ ಎನ್ನುವುದು ಚಿತ್ರದ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಕ್ರಿಷ್ಟಪರ್ ಖಿಣಿ, ನವೀನ್, ಕಿರಣ್ ಅಣ್ಣಿಗೇರಿ, ಮಾರುತಿ ಈಳಗೇರ, ವಿನಾಯಕ ಬದಿ, ಕೃಷ್ಣ ಲಮಾಣಿ ಉಪಸ್ಥಿತರಿದ್ದರು.