ಗದಗ: ನಗರದ ಪ್ರೇಕ್ಷಣಿಯ ತಾಣವಾದ ಐತಿಹಾಸಿಕ 111 ಅಡಿ ಎತ್ತರದ ವಿಶ್ವಗುರು ಬಸವೇಶ್ವರ ಪುತ್ಥಳಿಗೆ ರಾತ್ರಿ ದ್ವೀಪದ ಬೆಳಕಿಲ್ಲದೆ ಕತ್ತಲಿನಲ್ಲಿದೆ.
ಬಸವೇಶ್ವರ ಪುತ್ಥಳಿ ಸುತ್ತಲೂ ಹಾಕಿದ ಹೈ-ಮಾಸ್ಕ್ ಲೈಟ್ ಗಳು ಬೆಳಗದ ಕಾರಣ ಮೂರ್ತಿಯ ಸುತ್ತಲೂ ಕತ್ತಲೂ ಆವರಿಸಿದೆ.
ಕಳೆದ ೧೫ ದಿನಗಳಿಂದ ವಿಶ್ವಗುರು ಬಸವೇಶ್ವರ ಉದ್ಯಾನ ಮತ್ತು ಪುತ್ಥಳಿ ಕತ್ತಲು ಆವರಿಸಿದೆ..
ಒಂದೂವರೆ ದಶಕದ ಹಿಂದೆ 111 ಅಡಿ ಎತ್ತರದ ಪುತ್ಥಳಿ ನಿರ್ಮಿಸಲಾಗಿತ್ತು. ಪುತ್ಥಳಿಯ ಕೆಳಭಾಗದಲ್ಲಿ ಬಸವಣ್ಣನ ಜೀವನ ದರ್ಶನ ಮತ್ತು ಸಾಮಾಜಿಕ ಕ್ರಾಂತಿಯ ಪ್ರಮುಖ 10ಕ್ಕೂ ಹೆಚ್ಚು ಸನ್ನಿವೇಶಗಳನ್ನು ಸರಳವಾಗಿ ಜನರಿಗೆ ಅರ್ಥೈಸಲು ಸಿಮೆಂಟ್ ಕಲಾಕೃತಿಗಳಲ್ಲಿ ಬಿಂಬಿಸಲಾಗಿದೆ. ಸುಂದರವಾದ ಮ್ಯೂಸಿಯಂ ಸ್ಥಾಪಿಸಲಾಗಿದೆ. ಹಿನ್ನೆಲೆ ಧ್ವನಿಯಲ್ಲಿ ಪ್ರತಿಯೊಂದು ಸನ್ನಿವೇಶ ಬಗ್ಗೆ ವಿವರಿಸಲಾಗುತ್ತಿದೆ.ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಪ್ರಮುಖ ಆಕರ್ಷಣೆಯಾಗಿದೆ.
ಆ ನಂತರ ದಿನಗಳೆದಂತೆ ಬಸವೇಶ್ವರರ ಪುತ್ಥಳಿ ಸುತ್ತಲೂ ಸುಂದರವಾದ ಉದ್ಯಾನ ಅಭಿವೃದ್ಧಿ ಹಾಗೂ ಪ್ರವಾಸಿಗರ ಆಕರ್ಷಣೆಯಾಗಿದ್ದು ಇಂದು ಇದೇ ಐತಿಹಾಸಿಕ ಬಸವೇಶ್ವರ ಮೂರ್ತಿಯು ಕತ್ತಲೆಯಇದ್ದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಜಾಣ ಕುರುಡುತನಕ್ಕೆ ಜಾರಿದ್ದಾರೆ.
ಆದ್ರೆ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್ ಕೆ ಪಾಟೀಲ್ ರ ತವರು ಜಿಲ್ಲೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ.. ಸಚಿವರು ಬಸವಣ್ಣನ ಪುತ್ಥಳಿ ಅಭಿವೃದ್ಧಿ ಬಗ್ಗೆ ಸಾಕಷ್ಟು ಸಭೆ ಮಾಡಿದ್ದಾರೆ. ಅಧಿಕಾರಿಗಳು ಮಾತ್ರ ನಿರ್ವಹಣೆ ಮಾಡುತ್ತಿಲ್ಲ. ಸಾಂಸ್ಕೃತಿಕ ನಾಯಕ ಬಸವಣ್ಣನವರ ಪುತ್ಥಳಿ ಇರುವ ಸ್ಥಳವನ್ನ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ ಹೀಗಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಮೇಲೆ ಸಚಿವ ಎಚ್ ಕೆ ಪಾಟೀಲ್ ಕ್ರಮ ವಹಿಸಿಬೇಕಿದೆ..