ಗದಗ: ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದ ‘ಕಂಪ್ಯೂಟರ್ ಸ್ಪೀಡ್ ಟೆಸ್ಟ್’ ಸ್ಪರ್ಧೆಯಲ್ಲಿ ಗದಗ ಶಹರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಉಮೇಶ ಎನ್.ಹೊಸಳ್ಳಿ ಮೂರನೇ ಬಾರಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವ ಉಮೇಶ ಹೊಸಳ್ಳಿ ಅವರಿಗೆ ಬೆಂಗಳೂರಿನ ಪೊಲೀಸ್ ಗಣಕ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೆಶಕ ಡಾ.ಪ್ರಣವ್ ಮಹಾಂತಿ, ಬೆಂಗಳೂರು ನಗರ ಎಫ್‍ಎಸ್‍ಎಲ್ ನಿರ್ದೇಶಕಿ ಡಾ.ದಿವ್ಯಾ ಗೋಪಿನಾಥ ಹಾಗೂ ಬೆಂಗಳೂರಿನ ಎಸ್.ಸಿ.ಆರ್.ಬಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರು ಪದಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಿದ್ದಾರೆ.
ಗದುಗಿನ ಕೀರ್ತಿಯನ್ನು ಹೆಚ್ಚಿಸಿದ ಉಮೇಶ ಅವರಿಗೆ ಗದಗ ಎಸ್‌ಪಿ ಬಿ.ಎಸ್.ನೇಮಗೌಡ, ಡಿಎಸ್ಪಿ, ಗದಗ ಶಹರ ಸಿಪಿಐ, ಪಿಎಸ್‍ಐ ಅಭಿನಂದಿಸಿದ್ದಾರೆ.