ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಇಂದು ವಾಹನ ಲೈಸೆನ್ಸ್, ಶಹರ/ಗ್ರಾಮೀಣ ಪರವಾನಿಗೆ, ಯುನಿಫಾರ್ಮ್ ಮತ್ತು ನೋಂದಣಿ ಹೀಗೆ ವಿವಿಧ ದಾಖಲಾತಿ ಪರಿಶೀಲಿಸಿದ ಪೊಲೀಸ್ ಇಲಾಖೆ ಒಟ್ಟು116 ಆಟೋ ಸಿಜ್ ಮಾಡಿ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಗದಗ-ಬೆಟಗೇರಿ ನಗರದಲ್ಲಿ ಇಂದು 8 ಪ್ರಮುಖ ವೃತ್ತಗಳಲ್ಲಿ ವಿಶೇಷವಾಗಿ ಅಧಿಕಾರಿಗಳ ತಂಡ ರಚಿಸಿಸುವ ಮೂಲಕ ಕಾರ್ಯಾಚರಣೆ ನಡೆಸಿದ ಜಿಲ್ಲಾ ಪೊಲೀಸ್ ಇಲಾಖೆಯು ದೋಷಪೂರಿತ ಹಾಗೂ ದಾಖಲಾತಿ ಸೇರಿದಂತೆ ಒಟ್ಟು 116 ಆಟೋಗಳನ್ನು ಸೀಜ್ ಮಾಡಿದ್ದಾರೆ.
ಇಂದು ಗದಗ-ಬೆಟಗೇರಿ ಅವಳಿ ನಗರದ ಮಹಾತ್ಮ ಗಾಂಧೀ ವೃತ್ತ, ಮುಳಗುಂದ ನಾಕಾ, ಹಳೆ ಜಿಲ್ಲಾಧಿಕಾರಿ ಕಚೇರಿ, ಕೆ.ಎಚ್. ಪಾಟೀಲ ವೃತ್ತ, ಬಸವೇಶ್ವರ ವೃತ್ತ, ಹಾತಲಗೇರಿ ನಾಕಾ ಸೇರಿ 8 ಪ್ರಮುಖ ವೃತ್ತಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ 116ಕ್ಕೂ ಅಧಿಕ ಆಟೋಗಳನ್ನು ಸೀಜ್ ಮಾಡಿ, ಕಾನೂನು ಉಲ್ಲಂಘಿಸುವವರಿಗೆ ಚುರುಕು ಮುಟ್ಟಿಸಿದ್ದಾರೆ ಮುಂದಿನ ದಿನಗಳಲ್ಲಿ ಇದೇ ರೀತಿಯ ವರ್ತನೆ ಮುಂದುವರಿಸಿದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದ ಎಚ್ಚರಿಕೆ ನೀಡಿ ದಂಡ ಭರಿಸಿದ ನಂತರ ವಾಹನಗಳನ್ನು ರಿಲೀಸ್ ಮಾಡಿದ್ದಾರೆ.