ಸಾಮಾಜಿಕ ಬದಲಾವಣೆಗಳ ಹಿಂದೆ ಸಂವಿಧಾನದ ಪಾತ್ರ ಮಹತ್ವದ್ದು : ರವಿ ಗುಂಜೀಕರ

ಸಮಗ್ರ ಪ್ರಭ ಸುದ್ದಿ
2 Min Read

ಗದಗ : ಕಳೆದ 75 ವರ್ಷಗಳಲ್ಲಿ ಭಾರತ ದೇಶದಲ್ಲಾದ ಸಾಮಾಜಿಕ ಬದಲಾವಣೆಗಳ ಹಿಂದೆ ಭಾರತ ಸಂವಿಧಾನದ ಪಾತ್ರ ಬಹು ಮುಖ್ಯವಾಗಿದೆ ಎಂದು ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಸಂವಿಧಾನ ಜಾಗೃತಿ ಅಭಿಯಾನದ ಗಜೇಂದ್ರಗಡ ತಾಲೂಕು ನೋಡಲ್ ಅಧಿಕಾರಿಗಳಾದ ರವಿ ಗುಂಜೀಕರ ಹೇಳಿದರು.

ಗಜೇಂದ್ರಗಡದಲ್ಲಿ ಗುರುವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಜರುಗಿದ ಸಂವಿಧಾನ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವತಂತ್ರ ಭಾರತದ ನಂತರ ಡಾ.ಬಿ.ಆರ್.ಅಂಬೇಡ್ಕರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು. ಸಂವಿಧಾನ ರಚಿಸುವ ಸಂಪೂರ್ಣ ಹೊಣೆ ಹೊತ್ತ ಬಾಬಾಸಾಹೇಬ ಅಂಬೇಡ್ಕರ ಅವರು ಇಂಗ್ಲೆಂಡ್, ಜಪಾನ್, ಬ್ರಿಟನ್, ಅಮೇರಿಕಾ, ರಷ್ಯಾ ಸೇರಿದಂತೆ ಹಲವು ದೇಶಗಳೊಂದಿಗೆ ನಿರಂತರ ಚಿಂತನ ಮಂಥನ ನಡೆಸಿ ಕಠಿಣ ಪರಿಶ್ರಮದಿಂದ ಬೃಹತ್ ಲಿಖಿತ ರೂಪದ ಸಂವಿಧಾನದ ಕೊಡುಗೆ ನೀಡಿದ್ದು ನಮಗೆಲ್ಲರಿಗೂ ಹೆಮ್ಮೆ ಮತ್ತು ಅಭಿಮಾನದ ಸಂಗತಿಯಾಗಿದೆ ಎಂದರು.

ಭಾರತದ ಸಂವಿಧಾನ ಅಂಗೀಕಾರಗೊಂಡು ಎಪ್ಪತ್ತೈದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ಜನೆವರಿ 26ರಿಂದ ಫೆಬ್ರುವರಿ 26ರವರೆಗೆ ಸಾರ್ವಜನಿಕರಲ್ಲಿ ಸಂವಿಧಾನದ ಮಹತದ ್ವ ಕುರಿತು ಜಾಗೃತಿ ಮೂಡಿಸುವ ಸ್ತಬ್ದಚಿತ್ರಗಳನ್ನು ಪ್ರದರ್ಶಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವುದೇ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಸ್ವತಂತ್ರ ಭಾರತದ ಆಡಳಿತ ಅವಧಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರು ಕಾನೂನು ಸಚಿವರಾಗಿ ದೇಶ ಸೇವೆಯಲ್ಲಿದ್ದರು. ಸಂವಿಧಾನ ರಚಿಸಿ ಸಂಸತ್ತಿನಲ್ಲಿ ಮಂಡಿಸುವ ಸಮಯದಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ಕೊಡಿಸಬೇಕು ಎಂದು ಪ್ರತಿಪಾದಿಸಿದ್ದರು. ಸಂವಿಧಾನದ ಧ್ಯೇಯೋದ್ದೇಶಗಳು ಜಿಲ್ಲೆಯ ಮನೆ ಮನೆಗೆ ತಲುಪುತ್ತಿರುವುದು ಸಂತಸದ ವಿಷಯವಾಗಿದೆ ಎಂದು ರವಿ ಗುಂಜೀಕರ ಹೇಳಿದರು.

ಉಪನ್ಯಾಸಕರಾದ ಕಮ್ಮಾರ ಅವರು ಮಾತನಾಡಿ ಈ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಸಂವಿಧಾನದ ಆಶಯಗಳನ್ನ ಜೀವನದಲ್ಲಿ ಅಳವಡಿಸುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ ಅವರನ್ನು ನಿರಂತರವಾಗಿ ಸ್ಮರಿಸಿ ಗೌರವಿಸಬೇಕು ಎಂದು ತಿಳಿಸಿ ಸಂವಿಧಾನದ ಮಹತ್ವದ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ ವೀರಣ ್ಣಶೆಟ್ಟರ, ರವಿ ಬಿದರೂರ , ಸಮಾಜ ಕಲ್ಯಾಣ ಸಹಾಯಕ ಅಧಿಕಾರಿ ಗೀತಾ ಆಲೂರ, ರೋಣ ತಾಲೂಕ ಸಮಾಜ ಕಲ್ಯಾಣ ಅಧಿಕಾರಿ ಎಚ್.ಕೆ.ಚುಂಚಾ, ಗ್ರಾಪಂ ಅಧ್ಯಕ್ಷೆ ಶ್ರೀಮತಿ ಮಲ್ಲಮ್ಮ, ಬಸವರಾಜ ಕಲಬಿನ್ನ, ಜಗದೀಶ ಹಿರೇಮಠ, ಶಶಿ ವಕ್ಕಲರ, ಗ್ರಾಪ ಸದಸ್ಯರು, ವಿವಿಧ ಸಂಘಟನೆ ಪದಾಧಿಕಾರಿಗಳು, ಪ್ರಾಥಮಿಕ, ಪ್ರೌಡ ಮತ್ತು ಪದವಿ ಮಹಾವಿದ್ಯಾಲಯದ ಉಪನ್ಯಾಸಕರು ಹಾಜರಿದ್ದರು.

Share this Article