ಡಂಬಳ ಭಾಗದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆ ಶೀಘ್ರದಲ್ಲೇ ಸರ್ಕಾರ ಆದೇಶ

ಸಮಗ್ರ ಪ್ರಭ ಸುದ್ದಿ
1 Min Read

ಡಂಬಳ: ಪ್ರಾಚೀನ ಕಾಲದಿಂದಲು ಶ್ರೇಷ್ಠವಾದ ಹಣ್ಣು ಹಂಪಲು ಸೇರಿದಂತೆ ವಿವಿಧ ಬೆಳೆಗಳ ಬೆಳೆಯಲು ಡಂಬಳ ಭಾಗದ ಕೃಷಿ ಜಮೀನು ಅತ್ಯಂತ ಯೋಗ್ಯವಾದ ಭೂಮಿಯಾಗಿದೆ ಈ ಭಾಗದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆಗೆ ಪೂರಕ ವಾತಾವರಣವಿದೆ ಎಂದು ರೋಣ ಶಾಸಕ ಜಿ.ಎಸ್.ಪಾಟೀಲ ಅಭಿಪ್ರಾಯಪಟ್ಟರು.

ಡಂಬಳದಲ್ಲಿ ಇತ್ತಿಚೀಗೆ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆ ಮಾಡುವ ವಿಚಾರವಾಗಿ ರೈತರ ಜಮೀನುಗಳಲ್ಲಿ ಬೆಳೆದ ಬೆಳೆ ಮತ್ತು ಡಂಬಳ ಮತ್ತು ಮೇವುಂಡಿ ಗ್ರಾಮದ ಸರಹದ್ದಿನ ಸರ್ವೇ ನಂ.50 ರಲ್ಲಿನ 72 ಎಕರೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆ ಮಾಡುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀನೆ ನಡೆಸಿ ಮಾತನಾಡಿದರು.

ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರ ನೇತೃತ್ವದಲ್ಲಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದ್ದು, ಶೀಘ್ರದಲ್ಲಿಯೇ ಈ ಭಾಗದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆ ಕುರಿತು ಸರ್ಕಾರದಿಂದ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದರು.

ಶಿಂಗಟಾಲೂರ ಏತನೀರಾವರಿ ಯೋಜನೆಯಡಿಯಲ್ಲಿ ಡಂಬಳ, ಪೇಠಾಲೂರ, ತಾಮ್ರಗುಂಡಿ, ಜಂತಲಿಶಿರೂರ, ಹಿರೇವಡ್ಡಟ್ಟಿ, ಮುರಡಿ ಮುಂತಾದ ಭಾಗದಲ್ಲಿನ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಡಂಬಳದ ವಿಕ್ಟೋರಿಯಾ ಮಹಾರಾಣೆ ಕೆರೆ ಸುಮಾರು 450 ಎಕರೆ ಪ್ರದೇಶ ಹೊಂದಿದ್ದು ಅಂದಾಜು 3,500 ಎಕರೆ ಪ್ರದೇಶದಲ್ಲಿನ ಜಮೀನುಗಳಿಗೆ ನೀರಾವರಿಯಾಗುತ್ತದೆ. ಈ ಭಾಗದಲ್ಲಿ ಅತಿ ಹೆಚ್ಚು ರೈತರು ಈರುಳ್ಳಿ, ಪೇರಲ, ಮೆನಸಿಣಕಾಯಿ, ಬಾಳೆಹಣ್ಣು, ಸಿಹಿಬಾರೆಹಣ್ಣು ಸೇರಿ ದಂತೆ ವಿವಿಧ ರೀತಿಯ ಬೆಳೆಯನ್ನು ಬೆಳೆಯುತ್ತಾರೆ ಎಂದು ವಿಜ್ಞಾನಿಗಳಿಗೆ ಮಾಹಿತಿ ನೀಡಿದರು.

ಭಾಗಲಕೋಟಿ ತೋಟಗಾರಿಕೆ ವಿವಿ ವಿಜ್ಞಾನಿ ಡಾ. ರವೀಂದ್ರ ಮುಳಗೆ, ಧಾರವಾಡ ಕೃಷಿ ವಿವಿಯ ಡಾ. ಎಸ್.ಎಸ್. ಅಂಗಡಿ, ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

TAGGED:
Share this Article