ಜನೆವರಿ 30 ರಂದು ಡಬಲ್ ಡೆಕ್ಕರ್ ಅಂಬಾರಿ ಬಸ್‍ಗೆ ಚಾಲನೆ

ಸಮಗ್ರ ಪ್ರಭ ಸುದ್ದಿ
1 Min Read

ಗದಗ : ನಗರದಲ್ಲಿ ಸಂಚಾರ ಮಾಡಲು ಡಬಲ್ ಡೆಕ್ಕರ್ ಅಂಬಾರಿ ಬಸ್‍ಗೆ ರಾಜ್ಯದ ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳು ಸಂಸದೀಯ ವ್ಯವಹಾರಗಳು, ಶಾಸನಗಳ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಜನೆವರಿ 30 ರಂದು ಸಮಯ ಬೆಳಿಗ್ಗೆ 9.15 ಗಂಟೆಗೆ ಚಾಲನೆ ನೀಡಲಿದ್ದಾರೆ.

ಸದರಿ ಬಸ್‍ನ ಟಿಕೆಟ್ ದರ ವಿದ್ಯಾರ್ಥಿಗಳಿಗೆ ರೂ.100 ಹಾಗೂ ಸಾರ್ವಜನಿಕರಿಗೆ ರೂ.120 ಇರುತ್ತದೆ. ಅಂಬಾರಿ ಬಸ್‍ನ ಸಮಯ ಬೆಳಿಗ್ಗೆ 9.30 ರಂದ ಸಂಜೆ 6 ಗಂಟೆಯವರೆಗೆ ಇರುತ್ತದೆ. ಅಂಬಾರಿ ವಾಹನ ಚಲಿಸುವ ಮಾರ್ಗ ಹೊಸ ಬಸ್ ನಿಲ್ದಾಣದಿಂದ – ಬಸವೇಶ್ವರ ಮೂರ್ತಿ ಪುತ್ಥಳಿ ಮ್ಯೂಸಿಯಂ – ಭೀಷ್ಮ ಕೆರೆಯ ಬೋಟಿಂಗ್ – ಹೊಸ ಜಿಲ್ಲಾಧಿಕಾರಗಳ ಕಚೇರಿ- ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಅಥವಾ ಸಾಲುಮರದ ತಿಮ್ಮಕ್ಕ ಪಾರ್ಕ- ಮರಳಿ ಅದೇ ಮಾರ್ಗವಾಗಿ ಹೊಸ ಬಸ್ ನಿಲ್ದಾಣಕ್ಕೆ ಬಂದು ಸೇರುತ್ತದೆ. ವಾಹನದ ಸದುಪಯೋಗವನ್ನು ಸಾರ್ವಜನಿಕರು ವಿದ್ಯಾರ್ಥಿ ಪ್ರವಾಸಿಗರು ಪಡೆಯಲು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.

Share this Article