ಗದಗ: 2024ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ ಅಕಾಲಿಕ ಮಳೆ ಬಾಂಬ ಯುದ್ಧ ಭೀತಿ ಭೂ ಕಂಪನ ಜಲ ಕಂಟಕ ಸೇರಿದಂತೆ ಜಗತ್ತಿಗೆ ಅಪಾಯವಿದೆ ಎಂದು ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಇಂದು ನಗರದಲ್ಲಿ ಭವಿಷ್ಯ ನುಡಿದಿದ್ದಾರೆ.
ಅಕಾಲಿಕ ಮಳೆಯಿಂದ 2024 ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ ಬಾಂಬ್ ಸಿಡಿಯುವ ಸಂಭವ ಇದ್ದು ಯುದ್ಧ ಭೀತಿ ಇದೆ ಜನರು ತಲ್ಲಣವಾಗುತ್ತಾರೆ ಭೂಕಂಪನ ಜಲ ಕಂಟಕವಿದೆ ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ ಹಾಗೂ ಜಗತ್ತಿನಲ್ಲಿ ಒಂದೆರಡು ಪ್ರಧಾನಿಗಳಿಗೆ ಸಾವಾಗುವ ಲಕ್ಷಣವಿದೆ ಅಸ್ಥಿರತೆ, ಯುದ್ಧ ಭೀತಿ ಅಣು ಬಾಂಬ್ ಸ್ಫೋಟವಾಗುವ ಅವಕಾಶವಿದ್ದು ಮತೀಯ ಸಮಸ್ಯೆಯಿಂದ ಜನರು ದುಖಃ ಅನುಭವಿಸುತ್ತಾರೆ ಇದಕ್ಕೆ ದೈವ ನಂಬುವುದೊಂದೆ ಪರಿಹಾರ ದೈವ ಮೊರೆ ಹೋಗಬೇಕು ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.