ಸರ್ಕಾರಿ ವಾಹನ ಡಿಕ್ಕಿ ಬೈಕ ಸವಾರ ಸಾವು

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ಬೈಕ್ ಗೆ ಸರ್ಕಾರಿ ವಾಹನ ಡಿಕ್ಕಿ ಪರಿಣಾಮ ಸ್ಥಳದಲ್ಲೇ ಬೈಕ ಸವಾರ ಸಾವನ್ನಪ್ಪಿದ ಘಟನೆ ಗದಗ ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ನಡೆದಿದೆ.

ಕಣಗಿನಾಳ ಗ್ರಾಮದಿಂದ ಕಳಸಾಪೂರ ಹೋಗುತ್ತಿದ್ದ ಬೈಕ್ ಸವಾರ ಹುಬ್ಬಳ್ಳಿ ಯಿಂದ ವೇಗದಿಂದ ಬರ್ತಾಯಿದ್ದ ಧಾರವಾಡ ಕೆಸಿಸಿ ಬ್ಯಾಂಕ್ ಗೆ ಸೇರಿದ ಸರ್ಕಾರಿ ಜೀಪ್ ಬೈಕಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಡಿಕ್ಕಿ ರಭಸಕ್ಕೆ ನೂರು ಅಡಿ ದೂರ ಬಿದ್ದು ಬೈಕ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅಪಘಾತ ಬಳಿಕ ಸ್ಥಳದಲ್ಲೇ ಜೀಪ್ ಬಿಟ್ಟು ಎಸ್ಕೇಪ್ ಆದ ಜೀಪ್ ಚಾಲಕ ಇದೆ ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಕೋರಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ ಕಳಸಾಪೂರ ಹಾಗೂ ಸುತ್ತಲಿನ ಗ್ರಾಮದ ರೈತರು.

ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೋಲಿಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Share this Article