ಗದಗ: ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಜನೆವರಿ 07 ರಂದು ನಟ ಯಶ್ ಹುಟ್ಟು ಹಬ್ಬದ ಅಂಗವಾಗಿ
ಬ್ಯಾನರ್ ಹಾಕುವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಸಾವನ್ನಪ್ಪಿ, ನಾಲ್ಕು ಜನರಿಗೆ ಗಾಯವಾದ ಘಟನೆ ನಡೆದಿದ್ದು ಘಟನೆ ನಡೆದ ದಿನವೇ ನಟ ಯಶ್ ಗ್ರಾಮಕ್ಕೆ ಆಗಮಿಸಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದರು ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು ಸಾವನ್ನಪ್ಪಿದವರಿಗೆ ಸರ್ಕಾರ ತಲಾ 2 ಲಕ್ಷರೂಗಳ ಪರಿಹಾರ ನೀಡಿದ್ದರು ಇಂದು ಚಿತ್ರ ನಟ ಯಶ್ ಸ್ನೇಹಿತರಾದ ಚೇತನ, ರಾಕೇಶ್ ತಂಡ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಕುಟುಂಬಗಳಿಗೆ ತಲಾ 5 ಲಕ್ಷರೂಗಳ ಪರಿಹಾರದ ಚೆಕ್ ನೀಡಿದರು ಇನ್ನೂ ಘಟನೆಯಲ್ಲಿ ಗಾಯಗೊಂಡ ನಾಲ್ವರಿಗೆ ಎರಡು ದಿನದಲ್ಲಿ ಪರಿಹಾರ ನೀಡುವ ಭರವಸೆಯನ್ನು ಯಶ್ ಸ್ನೇಹಿತರು ನೀಡಿದ್ದಾರೆ.