ಗದಗ: ಸಂಕ್ರಾಂತಿ ಹಬ್ಬ ಹಿನ್ನಲೆಯಲ್ಲಿ ಸೋಮವಾರ ಬಿಂಕದಕಟ್ಟಿಯಲ್ಲಿರುವ ಕಿರು ಮೃಗಾಯಲಕ್ಕೆ ಒಂದೇ ದಿನ ಸುಮಾರು 8,529 ಜನರು ಭೇಟಿ ನೀಡಿದ್ದು ಇದರಿಂದ ಮೃಗಾಲಯಕ್ಕೆ ಸುಮಾರು 4,27,845 ರೂ ಆದಾಯ ಸಂಗ್ರಹವಾಗಿದೆ.
ಕುಟುಂಬ ಸಮೇತವಾಗಿ ಭೇಟಿ :
ಸಂಕ್ರಾತಿ ಹಬ್ಬದ ದಿನದಂದು ವಿವಿಧ ಬಗೆ ತಿಂಡಿ ತಿನಿಸುಗಳನ್ನು ಮಾಡಿಕೊಂಡು ಗದಗ ನಗರ ಸೇರಿದಂತೆ ವಿವಿಧ ಸುತ್ತಮುತ್ತಲಿನ ಜನರು ಮನೆಯಲ್ಲೇ ಪೂಜೆ ಮುಗಿಸಿ, ಕುಟುಂಬದವರ ಜತೆಗೂಡಿ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದರು ಈ ಬಾರಿಯ ಸಂಕ್ರಾತಿ ಹಬ್ಬಕ್ಕೆ ಬಿಂಕದಕಟ್ಟಿ ಮೃಗಾಲಯಕ್ಕೆ ಈ ಬಾರಿ ದಾಖಲೆ ಎಂಬಂತೆ 7,031 ಮಂದಿ ವಯಸ್ಕರು, 1498 ಮಕ್ಕಳು ಸೇರಿದಂತೆ ಒಟ್ಟು 8,529 ಮಂದಿ ಭೇಟಿ ನೀಡಿದ್ದಾರೆ.
ಟಿಕೆಟ್ ಶುಲ್ಕ, ಪಾರ್ಕಿಂಗ್ ಶುಲ್ಕ, ಕ್ಯಾಮೆರಾ ಶುಲ್ಕ ಸೇರಿದಂತೆ ವಿವಿಧ ಶುಲ್ಕದೊಂದಿಗೆ ಒಂದೇ ದಿನ ಒಟ್ಟು 4.27 ಲಕ್ಷ ಹಣ ಸಂಗ್ರಹವಾಗಿದೆ ಎಂದು ಆರ್‌ಎಫ್‌ಒ ಸ್ನೇಹಾ ಮಾಹಿತಿ ನೀಡಿದ್ದಾರೆ.