ವಿದ್ಯಾರ್ಥಿ ಜೊತೆಗೆ ಮುತ್ತಿನ ಸುರಿಮಳೆ ಗೈದಿದ್ದ ಶಿಕ್ಷಕಿ ಅಮಾನತು

ಸಮಗ್ರ ಪ್ರಭ ಸುದ್ದಿ
1 Min Read

ಚಿಕ್ಕಬಳ್ಳಾಪುರ: ವಿದ್ಯಾರ್ಥಿ ಜೊತೆಗೆ ಶಿಕ್ಷಕಿಯ ಅಸಭ್ಯ ವರ್ತನೆ ಹಿನ್ನೆಲೆಯಲ್ಲಿ ಪ್ರಭಾರಿ ಮುಖ್ಯಶಿಕ್ಷಕಿ ಪುಷ್ಪಲತಾ ಅಮಾನತುಗೊಳಿಸಿ ಚಿಕ್ಕಬಳ್ಳಾಪುರ ಡಿಡಿಪಿಐ ಬೈಲಾಂಜನಪ್ಪ ಆದೇಶ ಹೊರಡಿಸಿದ್ದಾರೆ.

ಶಿಕ್ಷಕಿ ಪುಷ್ಪಲತಾ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮುರುಗಮಲ್ಲ ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯಶಿಕ್ಷಕಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು.

ಇದೇ ಡಿಸೆಂಬರ್ 23 ರಿಂದ 26 ರವರೆಗೆ ನಡೆದ ಶಾಲಾ ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿ ಜೊತೆಗೆ ಶಿಕ್ಷಕಿ ಮುತ್ತಿನ ಸುರಿಮಳೆ ಗೈದು
ಅಸಭ್ಯವಾಗಿ ವರ್ತಿಸಿದ್ದಲ್ಲದೆ ಪೋಟೋಗೆ ಪೋಸ ನೀಡಿದ್ದಳು ಈ ಎಲ್ಲ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು
ಶಿಕ್ಷಕಿ ವರ್ತನೆ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದರು.

ಶಿಕ್ಷಕಿ ಅಸಭ್ಯ ವರ್ತನೆ ಶಿಕ್ಷಣ ಇಲಾಖೆಗೆ ಮಾಡಿದ ಅಪಮಾನ ಎಂದು ಚಿಂತಾಮಣಿ ಬಿಇಓ ಉಮಾದೇವಿ ವರದಿ ಆಧರಿಸಿ ಇಂದು ಚಿಕ್ಕಬಳ್ಳಾಪುರ ಡಿಡಿಪಿಐ ಬೈಲಾಂಜನಪ್ಪ ಆದೇಶ ಹೊರಡಿಸಿದ್ದಾರೆ.

Share this Article