ಗದಗ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿರುವುದಷ್ಟೇ ಅಲ್ಲ, ಪ್ರಜಾಪ್ರಭುತ್ವ ವಿರೋಧಿಯೂ ಆಗಿ ನಡೆದುಕೊಳ್ಳುತ್ತಿದೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಎಚ್. ಪಾಟೀಲ ಕಿಡಿಕಾರಿದರು.
ಕೇಂದ್ರ ಸರ್ಕಾರದ ಜನವಿರೋಧಿ ನೀತಿ, ನಡೆಯನ್ನು ಸಂಸತ್‌ನಲ್ಲಿ ಪ್ರಶ್ನಿಸುವ ವಿರೋಧ ಪಕ್ಷಗಳ ಸಂಸದರನ್ನು ಕೇಂದ್ರ ಸರ್ಕಾರವು ಅಮಾನತು ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಆರೋಪಿಸಿ ಶುಕ್ರವಾರ ನಗರದ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ತಮಗೆ ಎದುರಾಳಿಗಳೇ ಇರಬಾರದು, ಅವರ ಅನುಪಸ್ಥಿತಿಯಲ್ಲಿ ತಮಗೆ ಬೇಕಾದ ಬಿಲ್‌ಗಳನ್ನು ಚರ್ಚೆಯಿಲ್ಲದೇ ಪಾಸು ಮಾಡಿಕೊಳ್ಳಬಹುದು ಎಂಬ ಸರ್ವಾಧಿಕಾರಿ ಧೋರಣೆಯಿಂದ ಪ್ರಶ್ನಿಸುವ ವಿರೋಧ ಪಕ್ಷಗಳನ್ನು ಸದೆಬಡಿಯುವ ಉದ್ದೇಶದಿಂದ ಸಂಸದರನ್ನು ಅಮಾನತು ಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ.
ಇದು ಬಿಜೆಪಿ ಸರ್ಕಾರದ ಪೂರ್ವನಿರ್ಧರಿತ ಯೋಜನೆಯಾಗಿತ್ತು ಎಂದು ಈಚೆಗೆ ಉದ್ಯಮಿಯೊಬ್ಬರು ಸಂಸತ್‌ಗೆ ಹೋದಾಗ ಪಿಯೂಷ್ ಸಚಿವ ಗೋಯೆಲ್ ಅವರನ್ನು ಈ ಬಗ್ಗೆ ಖಾಸಗಿಯಾಗಿ ಕೇಳಿದಾಗ ‘ನಾಳೆ ಅಮಿತ್ ಶಾ ಅವರು ಮಾತನಾಡುವಾಗ ಉಳಿದವರೆಲ್ಲರೂ ಅಮಾನತು ಆಗುತ್ತಾರೆ, ನೋಡ್ತಾ ಇರಿ’ ಎನ್ನುವ ಧಾಟಿಯ ಉತ್ತರವನ್ನು ತಮ್ಮ ಟ್ವೀಟರ್‌ನಲ್ಲಿ ಹಂಚಿಕೊAಡಿದ್ದೇ ಸಾಕ್ಷಿ ಎಂದು ಉದಾಹರಿಸಿದರು.
ಸಂಸತ್ ಭವನ ದೇಶದ ದೇಗುಲವಿದ್ದಂತೆ. ಅಲ್ಲಿ ಹೆಚ್ಚು ಭದ್ರತೆಯೂ ಇದೆ. ಆದರೆ, ಇದರ ಮಧ್ಯೆಯೂ ಈಚೆಗೆ ಇಬ್ಬರು ಯುವಕರು ಬಿಜೆಪಿಯ ಸಂಸದರೊಬ್ಬರ ಮೂಲಕ ಪಾಸ್ ಪಡೆದು, ಸಂಸದರಿದ್ದ ಸ್ಥಳಕ್ಕೆ ಜಿಗಿದು, ಭಯಪಡಿಸಿದ್ದಾರೆ. ಇದು ಭದ್ರತಾ ವೈಫಲ್ಯವನ್ನು ತೋರುತ್ತದೆ.
ಹೀಗಿದ್ದರೂ ಆ ಯುವಕರು ಸಂಸತ್ ಪ್ರವೇಶ ಪಡೆಯಲು ಪಾಸ್ ನೀಡಿದ ರಾಜ್ಯದ ಸಂಸದರೂ ಈ ಬಗ್ಗೆ ಮಾತನಾಡಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಭದ್ರತೆ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಕೇಂದ್ರ ಗೃಹ ಸಚಿವರು ಕೂಡ ಈ ಬಗ್ಗೆ ಮಾತನಾಡುತ್ತಿಲ್ಲ.
ಈ ಘಟನೆಯನ್ನು ನಾವೆಲ್ಲರೂ ಖಂಡಿಸುತ್ತೇವೆ. ಆದರೆ, ಸಂಸತ್‌ನಲ್ಲಿನ ಈ ಭದ್ರತಾ ವೈಫಲ್ಯವನ್ನು ಸಂಸತ್‌ನಲ್ಲಿ ಪ್ರಶ್ನಿಸುವ ಆಡಳಿತ ಪ-ಕ್ಷವನ್ನು ಪ್ರಶ್ನಿಸುವ ವಿರೋಧ ಪಕ್ಷದ ಸದಸ್ಯರನ್ನು ಅಮಾನತು ಮಾಡುವ ಕ್ರಮ ಖಂಡನೀಯ. ಯುವಕರಿಗೆ ನೌಕರಿ ಇಲ್ಲ. ಬೆಲೆ ಹೆಚ್ಚಳ ಕಡಿತದ ಬಗ್ಗೆಯೂ ಯೋಚಿಸದ ಕೇಂದ್ರ ಸರ್ಕಾರದ್ದು ಸರ್ವಾಧಿಕಾರಿ ನಡೆ. ಇದು ಬಹಳ ದಿನ ನಡೆಯುವುದಿಲ್ಲ. ಮುಂಬರುವ ದಿನಗಳಲ್ಲಿ ರಾಜ್ಯ ಸೇರಿ ದೇಶದ ಜನ ಬಿಜೆಪಿಗೆ ತಕ್ಕ ಪಾಠ ಕಲಿಸದೇ ಬಿಡಲಾರರು ಎಂದು ಎಚ್ಚರಿಸಿದರು.
ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಅವರು ಮಾತನಾಡಿ, ಪ್ರಜಾಪ್ರಭುತ್ವದ ವಿರೋಧಿ ನಡೆಯಿಂದಾಗಿ ಬಿಜೆಪಿ ಸಂಸತ್ ಫುಲ್ ಖಾಲಿ ಖಾಲಿ ಆಗಿದೆ. ಸಂವಿಧಾನ ವಿರೋಧಿ, ಸರ್ವಾಧಿಕಾರಿ ನರೇಂದ್ರ ಮೋದಿ ಸರ್ಕಾರ, ನ್ಯಾಯ ಕೇಳಿದ ಸಂಸದರಿಗೆ ಹಿಟ್ಲರ್ ಬಿಜೆಪಿ ಸರ್ಕಾರದಿಂದ ಅನ್ಯಾಯ ಆಗುತ್ತಿದೆ. ದೇಶದ್ರೋಹಿ ಸಂಸದ ಪ್ರತಾಪ್ ಸಿಂಹನನ್ನು ಬಂಧಿಸುವAತೆ ಒತ್ತಾಯಿಸಿದ ಅವರು, 142 ಸಂಸದರ ಧ್ವನಿಗೆ ಬೆಲೆ ನೀಡದ ಹೊಣೆಗೇಡಿ ಕೇಂದ್ರ ಸರ್ಕಾರ, ಕೈಲಾಗದವರು ಮೈ ಪರಚಿಕೊಂಡAತಾಗಿದೆ ಬಿಜೆಪಿ ಪರಿಸ್ಥಿತಿ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಹಿರಿಯ ಮುಖಂಡರಾದ ಫಕ್ಕೀರಪ್ಪ ಹೆಬಸೂರ, ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಅವರು, ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನೀಲಮ್ಮ ಬೋಳನವರ, ಎಸ್‌ಸಿ ಘಟಕದ ಅಧ್ಯಕ್ಷ ಬಸವರಾಜ ಕಡೇಮನಿ, ಬ್ಲಾಕ್ ಅಧ್ಯಕ್ಷರಾದ ಶರಣಪ್ಪ ಬೆಟಗೇರಿ, ಡಿ.ಡಿ. ಮೋರನಾಳ, ನಗರಸಭೆ ಸದಸ್ಯರಾದ ಬರಕತ್‌ಅಲಿ ಮುಲ್ಲಾ, ಶಕುಂತಲಾ ಅಕ್ಕಿ, ಲಕ್ಷಿö್ಮ ಸಿದ್ದಮ್ಮನಹಳ್ಳಿ, ಪರವೀನಬಾನು ಮುಲ್ಲಾ, ಮುಖಂಡರಾದ ಜಿ.ಎಂ. ದಂಡಿನ, ಉಮರಫಾರೂಕ್ ಹುಬ್ಬಳ್ಳಿ, ಅನೀಲ ಸಿದ್ದಮ್ಮನಹಳ್ಳಿ, ವಸಂತ ಸಿದ್ದಮ್ಮನಹಳ್ಳಿ, ವಿದ್ಯಾಧರ ದೊಡ್ಡಮನಿ, ಚನ್ನವೀರ ಮಳಗಿ, ಮಹಮ್ಮದ ಶಾಲಗಾರ, ಅಬ್ದುಲ್ ಮುನಾಫ ಮುಲ್ಲಾ, ವಿನಾಯಕ ಬಳ್ಳಾರಿ, ಮಂಜುನಾಥ ಪೂಜಾರ, ರಮೇಶ ಚಲವಾದಿ, ಶರಣಪ್ಪ ಗೊಳಗೊಳಕಿ, ಯುಸೂಫ ಡಂಬಳ, ಶಿವಾನಂದ ಕರಿಯಣ್ಣವರ, ಶಿವಾನಂದ ಮಾದರ, ಪರಪ್ಪ ಕಮತರ, ಆಂಜನೇಯ ಕಟಗಿ, ಸರ್ಫರಾಜ ಬಬರ್ಚಿ, ಮಂಜು ಮುಳಗುಂದ, ಎಚ್.ಕೆ. ಅಕ್ಕಿ, ಬಸವರಾಜ ಮನಗುಂಡಿ, ಸುರೇಶ ಮಾಗಡಿ, ಶಿವರಾಜ ಕೋಟಿ, ಸಂಗಮೇಶ ಕೆರಕಲಮಟ್ಟಿ, ಮಹ್ಮದಸಾಬ ಬೆಟಗೇರಿ, ಅನ್ವರ ನದಾಫ, ಮಹಾಂತೇಶ ಮಡಿವಾಳರ, ಶಂಭು ಕಾಳೆ, ಸುದೀರ ಶಿವಪೂರ, ಶರಣಪ್ಪ ಬೋಳನವರ, ರಮೇಶ ರೋಣದ, ಉಮರಫಾರೂಕ್ ಬಾರಿಗಿಡದ, ಕಿರಣ ಗಾಮನಗಟ್ಟಿ, ಅರವಿಂದ ಇಸ್ರಪ್ಪನವರ, ಚನ್ನಬಸಪ್ಪ ಅಕ್ಕಿ, ರಾಜು ಅಡರಕಟ್ಟಿ, ಕಾಶಪ್ಪ ಇಸ್ರಪ್ಪನವರ, ಮೋಹನ ದೊಡಕುಂಡಿ, ಕಿರಣ ಮಾರ್ಕಾಪೂರ, ಪ್ರವೀಣ ಜಂತ್ಲಿ, ಸಮೀರ ಕೊಟ್ಟೂರ, ಶಾಹೀದ ಶೇಖ, ಶಾರೂಖ ಹುಯಿಲಗೋಳ, ಪ್ರಧಾನಿ ಕರಿ, ಕೃಷ್ಣಾ ಬಳ್ಳಾರಿ, ಸಿದ್ದಣ್ಣ ಮೇಳಣ್ಣವರ, ರವಿ ಬಾವರೆ, ಈರಣ್ಣ ಭಜಂತ್ರಿ, ವೆಂಕಟೇಶ ಗುಜಮಾಗಡಿ, ಭಕ್ಷಿ ತಹಶೀಲ್ದಾರ, ಯುವರಾಜ ಬಳ್ಳಾರಿ, ಹನಮಂತ ದಾಸ್ವಲ, ನಾಜಿನಾಬೇಗಂ ಯಲಿಗಾರ, ಉಮಾ ದ್ಯಾವನೂರ, ಮುಸ್ತಾಕ ಸೈಯ್ಯದ, ಗಾಯತ್ರಿ ಸಿದ್ದಮ್ಮನಹಳ್ಳಿ, ಸುರೇಖಾ ಕುರಿ, ಲಲಿತಾ ಗೊಳಗೊಳಕಿ, ವಹೀದಾ ಕಲೀಫ, ಡಾ.ತನುಜಾ ಗೋವಿಂದಪ್ಪಗೌಡ್ರ, ರೇಣುಕಾ ಕುರಿ, ದ್ರಾಕ್ಷಾಯಿಣಿ ಹಾಸಲಕರ, ಬಸಮ್ಮ ಗುದ್ಲಾನವರ, ವಾಣಿ ಹಿರೇಮಠ, ಅಭಿಷಯ ಅಬಿನೇಶ, ನಾಡಗೌಡ್ರ, ಲಕ್ಷö್ಮಣ ವಡ್ಡರ ಸೇರಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.