ಗದಗ : ಶೀಘ್ರವೇ ಸರಕಾರದಿಂದ ಬರ ಪರಿಹಾರ ಮೊತ್ತವನ್ನು ಪಾವತಿಸಲಾಗುತ್ತಿದ್ದು, ಜಿಲ್ಲೆಯ ರೈತ ಬಾಂಧವರು ಇನ್ನೆರೆಡು ದಿನದೊಳಗಾಗಿ ತಮಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ತೋಟಗಾರಿಕೆ, ಕಂದಾಯ ಇಲಾಖೆ, ಗ್ರಾಮ ಒನ್ ಅಥವಾ ಸಿ.ಎಸ್.ಸಿ. ಸೆಂಟರ್ ಗಳಿಗೆ ಭೇಟಿ ನೀಡಿ ಎಫ್.ಐ.ಡಿ. ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಅವರು ತಿಳಿಸಿರುತ್ತಾರೆ.
ಜಿಲ್ಲೆಯ ಪ್ರತಿಯೊಬ್ಬ ರೈತರು ಸರಕಾರದ ಸೌಲಭ್ಯಗಳು ಹಾಗೂ ಸಹಾಯಧನ ಪಡೆಯಲು ರೈತರು ತಮಗೆ ಸಂಬಂಧಪಟ್ಟ ಎಲ್ಲಾ ಜಮೀನುಗಳನ್ನು (ಫ್ರೂಟ್ಸ್ ತಂತ್ರಾಂಶ) ಎಫ್.ಐ.ಡಿ ಗೆ ಕಡ್ಡಾಯವಾಗಿ ಜೋಡಣೆ ಮಾಡಿಸಬೇಕು. ಈಗಾಗಲೇ ಎಫ್.ಐ.ಡಿ. ಮಾಡಿಸಿಕೊಂಡ ರೈತರು ತಮ್ಮ ಎಫ್.ಐ.ಡಿ. ಗೆ ಎಲ್ಲ ಜಮೀನಿನ ಸರ್ವೆ ನಂಬರುಗಳು ಜೋಡಣಿಯಾಗಿದೆಯೋ ಅಥವಾ ಇಲ್ಲವೋ ಎಂದು ಕೂಡಲೇ ಪರಿಶೀಲಿಸಿಕೊಳ್ಳಿ ಮತ್ತು ಜಂಟಿ ಖಾತೆದಾರರಿದ್ದಲ್ಲಿ ಪ್ರತಿ ಒಬ್ಬ ಜಂಟಿ ಖಾತೆದಾರರು ಪ್ರತ್ಯೇಕವಾಗಿ ಸೌಲಭ್ಯವನ್ನು ಪಡೆಯಬೇಕೆಂದಲ್ಲಿ ಪ್ರತ್ಯೇಕವಾಗಿ ಎಫ್.ಐ.ಡಿ. ಮಾಡಿಸಿಕೊಳ್ಳಬೇಕೆಂದು ರೈತರ ಬಾಂಧವರಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿರುತ್ತಾರೆ.