ರೋಣ : ಸರ್ಕಾರ ಪರಿಹಾರ ಕೊಡದ ಹಿನ್ನೆಲೆ, ಸ್ಮಶಾನಕ್ಕೆ ತೆರಳಲು ರಸ್ತೆ ಬಿಡದ ಹೊಲದ ಮಾಲೀಕ ಹಾಗೂ ಸರ್ಕಾರದ ವಿರುದ್ಧ ನಿಧನ ಹೊಂದಿದ ಶವವಿಟ್ಟುಗ್ರಾಮಪಂಚಾಯತಮುಂದೆ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ
ಗದಗ ಜಿಲ್ಲೆ ರೋಣ ತಾಲ್ಲೂಕಿನ ಚಿಕ್ಕಮಣ್ಣೂರು ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆ ಯಲ್ಲಮ್ಮ ವಾಲ್ಮೀಕಿ (75) ಇಂದು ಮಧ್ಯಾನ್ಹ ನಿಧನ ಹೊಂದಿದ್ದಳು ಆದರೆ ಚಿಕ್ಕ ಮಣ್ಣೂರ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೆ ಸ್ಮಶಾನ ಇದ್ದು ಆದರೆ ಅದಕ್ಕೆ ದಾರಿ ಇಲ್ಲದ ಹಿನ್ನೆಲೆ ಗ್ರಾಮ ಪಂಚಾಯತಿ ಮುಂದೆ ಶವ ಇಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಣ್ಣೂರ ಗ್ರಾಮ ಪಂಚಾಯತ ಮುಂದೆ ಮೃತ ಯಲ್ಲಮ್ಮ ಸಂಬಂಧಿಕರು ಹಾಗೂ ಗ್ರಾಮಸ್ಥರಿಂದ ಕಟ್ಟಿಗೆಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮ ಪಂಚಾಯತಿ ಹಾಗೂ ಜಿಲ್ಲಾಡಳಿತದ ವಿರುಧ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.