ಬಿದಿ ಬದಿ ವ್ಯಾಪಾರಿಗಳ ಕಾಯ್ದೆ ಪಾಲಿಸದ ಅಧಿಕಾರಿಗಳ ವಿರುದ್ದ ಡಿ. 19ರಂದು ಪ್ರತಿಭಟನೆ

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ಬಿದಿ ವ್ಯಾಪಾರಿಗಳ ಕಾಯ್ದೆ ಪಾಲಿಸದೆ ನಮ್ಮ ಹಕ್ಕು ಹಾಗೂ ಯೋಜನೆ ಅನುಷ್ಠಾನಗೊಳಿಸದೇ ಬಿದಿ ವ್ಯಾಪಾರಿಗಳ ಕೋಟ್ಯಾಂತರ ರೂ. ಹಣ ಬಳಕೆ ಮಾಡದೇ ಸರ್ಕಾರಕ್ಕೆ ಹಿಂತಿರುಗಿ ಕಳುಹಿಸಿದ್ದಾರೆ. 2019ರಿಂದ 2021ರ ವರೆಗಿನ ಹಣವನ್ನು ಬಳಕೆ ಮಾಡಿದೇ ಇರುವುದರಿಂದ ಡಿ. 19ರಂದು 9ಸ್ಥಳಿಯ ಸಂಸ್ಥೆಗಳ ಬಿದಿ ಬದಿ ವ್ಯಾಪಾರಿಗಳ ಸಂಘಟನೆಯಿಂದ ಟಿಪ್ಪು ಸರ್ಕಲ್ ನಿಂದ ಡಿಸಿ ಕಛೇರಿ ವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಬಿದಿ ಬದಿ ವ್ಯಾಪಾರಸ್ಥರ ಸಂಘದ ರಾಜ್ಯ ಉಪಾಧ್ಯಕ್ಷ ಬಾಷಾಸಾಬ್ ಮಲ್ಲಸಮುದ್ರ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿದಿ ವ್ಯಾಪಾರಸ್ಥರಿಗೆ ಪಟ್ಟಣ ಮಾರಾಟ ಸಮೀತಿ ರಚಿಸಬೇಕು. ಹಾಗೂ ಮಾರ್ಕೆಟ್ ಜೋನ್ ಡಿಕ್ಲೆರ್ ಇದೂವರೆಗೂ ಮಾಡಿರದಿರುವುದು ಖಂಡನಿಯ. ಬಿದಿ ಬದಿ ವ್ಯಾಪಾರಿಗಳ ಪಟ್ಟಣ ಮಾರಾಟ ಸಮೀತಿಯ ಹೆಸರಿನಲ್ಲಿ ಖಾತೆ ತೆಗೆದು ಶುಲ್ಕ ಸಂಗ್ರಹಿಸಬೇಕಾದ ಅವಶ್ಯಕತೆ ಇದ್ದು ಪಿಎಮ್ ಸ್ವನಿಧಿ ಫಲಾನುಭವಿಗಳ ಆಯ್ಕೆಗೆ ಟಾಸ್ ಪೊಟ್ಸ್ ಸಮಿತಿ ರಚಿಸದೆ ನೇರವಾಗಿ ಕೊಟ್ಟಿ ಫಲಾನುಭವಿಗಳಿಗೆ ಶಿಫಾರಸ್ಸು ಮಾಡಿದ್ದಾರೆ ಎಂದು ಆರೋಪಿಸಿದರು.

ಪ್ರತಿ ಸ್ಥಳಿಯ ಸಂಸ್ಥೆಗಳಿಗೆ ಬಿದಿ ವ್ಯಾಪಾರಿಗಳ ಕಾಯ್ದೆ ಹಾಗೂ ಯೋಜನೆ ಅನುಷ್ಠಾನಗೊಳಿಸಲು ಕೌಶಲ್ಯ ಅಭಿವೃದ್ಧಿ ಹಾಗೂ ಡೇ-ನಲ್ಮಾ ಅಧಿಕಾರಿಗಳು ಭೇಟಿ ನೀಡದೇ, ಸಭೆ ನಡೆಸದೇ ಅಧಿಕಾರದ ದುರ್ಬಳಕೆ ಮಾಡಿದ್ದಾರೆ. ಅಲ್ಲದೇ ವ್ಯಾಪಾರಿಗಳ ಶುಲ್ಕ ಸಂಗ್ರಹಣೆಯನ್ನು ಇದೂವರೆಗೂ ಮಾಡಿಲ್ಲ. ಜೊತೆಗೆ ಭತ್ತೆ ಹಣವನ್ನು ನೀಡದಿರುವುದು ಖಂಡನೀಯ. ವ್ಯಾಪಾರಿಗಳಿಗೆ ಆರೋಗ್ಯ ತಪಸಣೆ ಹೆಸರಿನಲ್ಲಿ ಹಣ ಲೂಟಿ ಹೊಡೆಯುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ದ ಹರಿಹಾಯ್ದರು.

ಈ ಸಂದರ್ಭದಲ್ಲಿ ಹುತಿಜಾ ದೊಡ್ಮನಿ, ರಸಿದಾ ನದಾಪ್, ಜಾಹಂಗಿರಅಹ್ಮದ್ ಮುಳಗುಂದ, ನಿಂಗನಗೌಡ ಎಸ್ ಮಾಲಿಪಾಟೀಲ, ಭೀಮಣ್ಣ ಕೊಳಿ, ಮಾಬುಸಾಬ್ ಮುಳಗುಂದ, ಅಬ್ಬು ರಾಟಿ, ಮಂಜುನಾಥ ಹೊಗೆಸೊಪ್ಪಿನ, ಶಿವಾಜಿ ಮಧುಕರ ಸೇರಿದಂತೆ ಅನೇಕರ ಉಪಸ್ಥಿತರಿದ್ದರು.

Share this Article