ಶಬರಿ ಫೖೆನಾನ್ಸ ಕಾರ್ಪೋರೆಷನ್ 2024 ರ ನೂತನ ದಿನದರ್ಶಿಕೆ ಬಿಡುಗಡೆ

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ನಗರದ ಶಬರಿ ಚಿಟ್ಸ್ ಪ್ರೖೆ.ಲಿ. ಹಾಗೂ ಶಬರಿ ಫೖೆನಾನ್ಸ ಕಾರ್ಪೋರೆಷನ್ ಗದಗ ಇದರ 2024 ನೇ ವರ್ಷದ ನೂತನ ದಿನದರ್ಶಿಕೆಯನ್ನು ಬುಧವಾರ ನಗರದ ಕೆಸಿ ರಾಣಿ ರಸ್ತೆ ಸಿ ಎಸ್ ಪಾಟೀಲ ಶಾಲೆ ಎದುರುಗಡೆ ಇರುವ ಕಛೇರಿಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಸಲ್ಲಿಸಿ ಬಿಡುಗಡೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯ ಗುರುಸ್ವಾಮಿಗಳಾದ ವಿರೂಪಾಕ್ಷ ಪೋಲಿಸ್ ಪಾಟೀಲ ಶಬರಿ ಚಿಟ್ಸ್ ಪ್ರೖೆ.ಲಿ. ಹಾಗೂ ಶಬರಿ ಫೖೆನಾನ್ಸ ಕಾರ್ಪೋರೇಷನ್ ಸಂಸ್ಥೆಯು ಸಾರ್ವಜನಿಕರಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಹಣಕಾಸಿನ ನೆರವು ನೀಡಿ ಉತ್ತರಾಭಿಮುಖವಾಗಿ ಬೆಳೆಯಲು ಎಂದು ಆಶೀರ್ವಾದಿಸಿದರು.
ಕಾರ್ಯಕ್ರಮದಲ್ಲಿ ಗುರುಸ್ವಾಮಿಗಳಾದ ನಾಗರಾಜ ಬಾಗಲಕೋಟ, ಪ್ರಸಾದ ಕೋಡತ್ಕರ್,ಆನಂದ ಕಂಬಳಿ,ಕಿರಣ ಬೆಟಗೇರಿ,ಸಿದ್ಧಲಿಂಗಪ್ಪ ಉಮಚಗಿ,ರವಿ ತಳವಾರ,ಬಸವರಾಜ ರಾಮಶೆಟ್ಟಿ ಸೇರಿದಂತೆ ಅಯ್ಯಪ್ಪ ಮಾಲಾದಾರಿಗಳು ಸಂಸ್ಥೆಯ ಸಿಬ್ಬಂದಿಗಳಾದ ಸಂಗಯ್ಯ ಘಂಟಿಮಠ,ಚನ್ನಪ್ಪ ಬಾವಿ,ಪ್ರಶಾಂತ ಹಟ್ಟಿ,ಮಂಜುನಾಥ ಬಡಿಗೇರ,ವಿಶ್ವನಾಥ ಬೆಟಗೇರಿ,ಸುರೇಶ ಚಿತ್ತರಗಿ, ಹಾಗೂ ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.

 

Share this Article