ಸಾರ್ವಜನಿಕ ಶೌಚಾಲಯಕ್ಕೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

graochandan1@gmail.com
0 Min Read

ಗದಗ: ನಗರದಲ್ಲಿ ಶೌಚಾಲಯಕ್ಕೆ ಆಗ್ರಹಿಸಿ ಮಹಿಳೆಯರು ಬಕೆಟ್, ಚಂಬು ಹಿಡಿದುಕೊಂಡು ರಸ್ತೆಯಲ್ಲಿಟ್ಟು ಶೌಚಾಲಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯಲ್ಲಿ ಬರುವ 31 ನೇ ವಾರ್ಡನಲ್ಲಿರುವ 1ನೇ ನಂಬರ್ ಶಾಲೆಯ ಹತ್ತಿರ ಇರುವ ಸಾರ್ವಜನಿಕ ಶೌಚಾಲಯ ದುರಸ್ಥಿಗೊಳಿಸುವಂತೆ ಆಗ್ರಹ ಪ್ರತಿಭಟನೆ ನಡೆಸಿದರು.ಶೌಚಾಲಯದ ದುರಸ್ತಿಗೆ ಹಲವುಬಾರಿ ನಗರ ಸಭೆ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಸದಸ್ಯರಿಗೆ ಹೇಳಿದರು ಅವರು ಕ್ಯಾರೆ ಅಂತಿಲ್ಲ ಅಂತ ಅಳಲು ಆರೋಪಿಸಿದ್ದಾರೆ ಶೌಚಾಲಯ ದುರಸ್ತಿ ಆಗದೆ ಇದ್ದಿದರಿಂದ ಇಲ್ಲಿನ ಮಹಿಳೆಯರು,ಮಕ್ಕಳಿಗೆ ತೊಂದರೆಯಾಗಿದೆ ಜೊತೆಗೆ ಕಲುಶಿತ ನೀರು ನಿಂತಿದ್ದರಿಂದ ಸೊಳ್ಳೆಗಳ ಕಾಟ ಕೂಡ ಹೆಚ್ಚಾಗಿದೆ ನಮ್ಮ ಗೋಳು ಕೇಳೋರ‌್ಯಾರು ಅಂತಾ ಆಕ್ರೋಶ ವ್ಯಕ್ತಪಡಿಸಿದರು.

TAGGED:
Share this Article