ಗದಗ: ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಿನ್ನೆ ತಡ ರಾತ್ರಿ ಅಬಕಾರಿ ಇಲಾಖೆ ಅಧಿಕಾರಿಗಳು ಮನೆಯೊಂದರ ಮೇಲೆ ದಾಳಿ ನಡೆಸಿ ಒಣಗಿದ 15000 ರೂ. ಮೌಲ್ಯದ ಮಾರಾಟದ ಉದ್ದೇಶದಿಂದ ತಯಾರಿಸಿದ್ದ 54 ಪೌಚ್ ಗಳಲ್ಲಿನ ಒಟ್ಟು 348 ಗ್ರಾಂ ಗಾಂಜಾವನ್ನು ಮಾರಾಟ ಮಾಡುವ ವ್ಯಕ್ತಿ ಸಹಿತ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಆಧರಿಸಿ ತಿಮ್ಮಾಪುರ ಗ್ರಾಮದ ಹರಣಶುಕಾರಿ ಕಾಲೋನಿ ನಿವಾಸಿಯಾದಂತ ಬಾಲಪ್ಪ ಹರಣಶಿಕಾರಿ(52) ಮತ್ತು ಅಬ್ಬಿಗೇರಿ ಗ್ರಾಮದ ಯಲ್ಲಪ್ಪ ತೊಂಡಿಹಾಳ(37) ಗಾಂಜಾ ಸಮೇತವಾಗಿ ಬಂಧಿಸಿದ್ದಾರೆ.
ಈ ಸಂಧರ್ಭದಲ್ಲಿ ಅಬಕಾರಿ ಇಲಾಖೆ ನಿರೀಕ್ಷಕಿ ಕುಮಾರಿ. ನೇತ್ರಾ ಉಪ್ಪಾರ,ಉಪ ನಿರೀಕ್ಷಕಿ ಕುಮಾರಿ.ಆಶಾರಾಣಿ ಗುಡದಾರ ಸಿಬ್ಬಂದಿಗಳಾದ ನಜೀರಸಾಬ ಖುದಾವಂದ,ಮಂಜುನಾಥ ರಾಯನಗೌಡ್ರ, ಸಂತೋಷಯ್ಯ ನೆಲ್ಲೂರ,ಅಂಬೋಜಿ ಹಾಳಕೇರಿ,ರಮೇಶ ಬೆಣಗಿ ಸೇರಿದಂತೆ ಅಬಕಾರಿ ಇಲಾಖೆ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಈ ಕುರಿತು ನಗರದ ಅಬಕಾರಿ ಇಲಾಖೆಯ ಗದಗ ವಲಯ ಕಚೇರಿಯಲ್ಲಿ ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.