ಗದಗ: ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರರ ಸಂಘ, ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ, ಕ. ರಾ. ಪ. ಪೂ. ಕಾ ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ, ಹನುಮಾನ್ ಬ್ಲೆಸಿಂಗ್ ಸ್ಪೊಟ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ 2023-24ನೇ ಸಾಲಿನ ಹಾಕಿ ಕ್ರೀಡಾಕೂಟಗಳು ಡಿ. 8 ಮತ್ತು 9ರಂದು ನಡೆಯಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಡಾ. ಎಂ ಕೃಷ್ಣಪ್ಪ ಮಾಹಿತಿ ನೀಡಿದರು.
ಪ್ರತಿ ವರ್ಷದಂತೆ ಈ ವರ್ಷ ಗದಗ ಜಿಲ್ಲೆಗೆ ರಾಜ್ಯ ಮಟ್ಟದ ಹಾಕಿ ಪಂದ್ಯವಳಿ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಪದವಿ ಪೂರ್ವ ಇಲಾಖೆಯ ಅಧಿಕಾರಿಗಳು ಆಗಮಿಸಲಿದ್ದು, ಡಿ. 7ರ 4ಗಂಟೆಯ ಒಳಗೆ ನಗರದ ನಗರಸಭೆ ಪದವಿ ಪೂರ್ವ ಕಾಲೇಜಿನಲ್ಲಿ ತಂಡದ ಹೆಸರು ನೊಂದಾಯಿಸಬೇಕು ಎಂದರು.
ಬಾಲಕ-ಬಾಲಕಿಯರಿಗೆ ಪ್ರತ್ಯಕ ವಸತಿ ಸ್ಥಳ ಕಲ್ಪಿಸಲಾಗಿದ್ದು, ವಸತಿ ಇರುವ ಸ್ಥಳಗಳಿಗೆ ತೆರಳಲು ವಾಹನ ವ್ಯವಸ್ಥೆ ಮಾಡಲಾಗಿದೆ. ವಸತಿ ನಿಲಯಗಳಲ್ಲಿ ಎಲ್ಲ ಮೂಲಭೂತ ಸೌಲಭ್ಯ ಒದಗಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ತಂಡದೊಂದಿಗೆ ಆಗಮಿಸಿದ ಎಲ್ಲ ಮ್ಯಾನೆಜರ್ ಗಳಿಗೆ ಲಘು ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪಂದ್ಯಾವಳಿಗಳು ಯುಡಿಎಸ್ ಟಿ, ಕೆ ಎಚ್ ಪಾಟೀಲ ಕ್ರಿಡಾಂಗಣ ಹಾಗೂ ಮಹಾತ್ಮ ಗಾಂಧಿ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎಲ್ಲ ಕ್ರೀಡಾಂಗಣಗಳಿಗೂ ಇಲಾಖೆಯಿಂದ ಬಾಡಿಗೆ ನೀಡಲಾಗುವುದು. ವಸತಿ ವ್ಯವಸ್ಥೆಯನ್ನು ಕೆ ಹೆಚ್ ಪಾಟೀಲ ಸಭಾಭವನ, ಚಿಕ್ಕಟ್ಟಿ ಪದವಿ ಪೂರ್ವ ಕಾಲೇಜು, ಮನೊರಮ ಕಾಲೇಜು ಸೇರಿದಂತೆ ಹಲವು ಕಡೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿ ಜಿ ಜೋಗಣ್ಣನವರ, ಎಂ ಸಿ ಕಟ್ಟಿಮನಿ, ಎಸ್ ಎಸ್ ಸೋಮಣ್ಣನವರ, ರಮೇಶ್ , ಅಶೋಕ ಎಂ ಅಗಡಿ, ಜಿ ಎಸ್ ಶಿರಸಿ, ಪಿ ಜಿ ಹಿರಿತಿಮ್ಮಣ್ಣನವರ, ಪಿ ಎಸ್ ದಲಾಲಿ, ಡಿ ಎಲ್ ಪಾಟೀಲ, ಎಸ್ ಕೆ ಕಾಸಿ, ಎಸ್ ಸಿ ಪಾಟೀಲ ಉಪಸ್ಥಿತರಿದ್ದರು.