ಗದಗ: ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಬೆಟಗೇರಿಯ ಧರ್ಮಶಾಸ್ತ ಸನ್ನಿಧಾನದಲ್ಲಿ ಚಲನಚಿತ್ರ ನಟರು,ಅಯ್ಯಪ್ಪಸ್ವಾಮಿ ಭಕ್ತರು ಹಿರಿಯ ಗುರುಸ್ವಾಮಿಗಳಾದ ದಿವಗಂತ ಕೆ ಎಸ್ ಶಿವರಾಂ ಗುರುಗಳ 2 ನೇ ವರ್ಷದ ಪುಣ್ಯಸ್ಮರಣೆ ಮಾಡಲಾಯಿತು.
ದಿವಗಂತ ಕೆ ಎಸ್ ಶಿವರಾಂ ಅವರ ಜೀವನ ಶೈಲಿ ಧಾರ್ಮಿಕ ಆಚರಣೆ ಅವರ ಭಕ್ತಿ ಸೇರಿದಂತೆ ಗುರು ಪರಪಂರೆ ಸೇರಿದಂತೆ ಗದಗ ಜಿಲ್ಲೆಯ ಜೊತೆಗೆ ಅವರ ಸಂಬಂಧ ಎಲ್ಲವನ್ನೂ ಮೆಲಕು ಹಾಕುತ್ತಾ ದಿವಗಂತರಿಗೆ ನಮನಗಳನ್ನು ಸಲ್ಲಿಸಿದರು.
ಈ ಸಂಧರ್ಭದಲ್ಲಿ ಸಾಸ್ ಪದಾಧಿಕಾರಿಗಳಾದವೆಂಕಟೇಶ್ ದ್ವಾಸಲೇಕರಿ, ನಾಗರಾಜ ಬಾಗಲಕೋಟೆ,ಆನಂದ್ ಹೊಸಮನಿ,ಮಂಜುನಾಥ್ ಹಳ್ಳೂರಮಠ,ಪ್ರಸಾದ ಕೊಡಿತ್ಕರ್,ಜಗದೀಶ್ ಸಂಕನಗೌಡ್ರ,ಹನುಮಂತ ನಾಟಗರ್, ಸದಾನಂದ್ ಕಮ್ಮಾರ,ಶಿದ್ಧಲಿಂಗಪ್ಪ ಉಮಚಗಿ,ವೆಂಕಟೇಶ ಪೂಜಾರ, ಸೇರಿದಂತೆ ಗುರುಸ್ಮಾಮಿಗಳು ಎಲ್ಲಾ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಅಯ್ಯಪ್ಪ ಭಕ್ತರು ಉಪಸ್ಥಿತರಿದ್ದರು.