ಇಂದು ನಗರದ ಸಿಎಆರ್ ಕೇಂದ್ರ ಸ್ಥಾನದಲ್ಲಿ ನಡೆದ ಪ್ರಾಪರ್ಟಿ ಪರೇಡ್‍ನಲ್ಲಿ ಪಶ್ಚಿಮ ವಿಭಾಗದ 133 ದ್ವಿಚಕ್ರ ವಾಹನಗಳು, ಕೇಂದ್ರ ವಿಭಾಗದ 38 ವಾಹನಗಳು, ಉತ್ತರ ವಿಭಾಗದ 163, ದಕ್ಷಿಣ ವಿಭಾಗದ 88, ಪೂರ್ವ ವಿಭಾಗದ 37, ಈಶಾನ್ಯ ವಿಭಾಗದ 5, ಆಗ್ನೇಯ ವಿಭಾಗದ 78 ಮತ್ತು ವೈಟ್‍ಫೀಲ್ಡ್ ವಿಭಾಗದ 77 ವಾಹನಗಳು ಸೇರಿದಂತೆ ಒಟ್ಟು 619 ವಾಹನಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಉಪ್ಪಾರಪೇಟೆ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡರೆ ಸಿಟಿ ಮಾರ್ಕೆಟ್ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿ 13 ವಾಹನಗಳು, ಕಲಾಸಿಪಾಳ್ಯ 7 ಮಂದಿಯನ್ನು ಬಂಧಿಸಿ 18 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾಟನ್‍ಪೇಟೆ ಠಾಣೆ ಪೊಲೀಸರು 13 ಮಂದಿಯನ್ನು ಬಂಧಿಸಿ 55 ವಾಹನಗಳನ್ನು ವಶಪಡಿಸಿಕೊಂಡರೆ ಚಾಮರಾಜಪೇಟೆ ಆರು ಮಂದಿಯನ್ನು ಬಂಧಿಸಿ ಆರು ವಾಹನಗಳು, ಜೆಜೆನಗರ ಠಾಣೆ ಪೊಲೀಸರು 9 ಮಂದಿಯನ್ನು ಬಂಧಿಸಿ 37 ವಾಹನಗಳನ್ನು, ಬ್ಯಾಟರಾಯನಪುರ ಠಾಣೆ ಪೊಲೀಸರು 5 ಮಂದಿಯನ್ನು ಬಂಧಿಸಿ 47 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಚಂದ್ರಲೇಔಟ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 14 ವಾಹನಗಳು, ಆರ್‍ಆರ್‍ನಗರ ಠಾಣೆ ಪೊಲೀಸರು ಏಳು ಮಂದಿಯನ್ನು ಬಂಧಿಸಿ 16 ವಾಹನಗಳು, ಕೆಂಗೇರಿ ಠಾಣೆ ಪೊಲೀಸರು 12 ಮಂದಿಯನ್ನು ಬಂಧಿಸಿ 22 ವಾಹನಗಳು, ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಆರು ಮಂದಿಯನ್ನು ಬಂಧಿಸಿ 30 ವಾಹನಗಳು, ಬ್ಯಾಡರಹಳ್ಳಿ ಠಾಣೆ ಪೊಲೀಸರು ಐದು ಮಂದಿಯನ್ನು ಬಂಧಿಸಿ 25 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಜ್ಞಾನಭಾರತಿ ಠಾಣೆ ಪೊಲೀಸರು 9 ಮಂದಿಯನ್ನು ಬಂಸಿ 25 ವಾಹನಗಳನ್ನು, ವಿಜಯನಗರ ಠಾಣೆ ಪೊಲೀಸರು 7 ಮಂದಿಯನ್ನು ಬಂಧಿಸಿ 29 ವಾಹನಗಳು, ಮಾಗಡಿ ರಸ್ತೆ ಠಾಣೆ ಪೊಲೀಸರು ಒಬ್ಬನನ್ನು ಏಳು ವಾಹನಗಳನ್ನು ಹಾಗೂ ಕೆಪಿ ಅಗ್ರಹಾರ ಠಾಣೆ ಪೊಲೀಸರು ಮೂವರನ್ನು ಬಂಧಿಸಿ 13 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಸವೇಶ್ವರನಗರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ 11 ವಾಹನಗಳನ್ನು ವಶಕ್ಕೆ ಪಡೆದುಕೊಂಡರೆ ಕಾಮಾಕ್ಷಿ ಠಾಣೆ ಪೆಪೊಲೀಸರು 11 ಮಂದಿಯನ್ನು ಬಂಧಿಸಿ 36 ವಾಹನಗಳು ಹಾಗೂ ಗೋವಿಂದರಾಜನಗರ ಠಾಣೆ ಪೊಲೀಸರು 6 ಮಂದಿಯನ್ನು ಬಂಧಿಸಿ 15 ವಾಹನಗಳನ್ನು ಜಪ್ತಿ ಮಾಡಿದ್ದಾರೆ.