ಲಕ್ಷ್ಮೇಶ್ವರ : ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಮೆಣಸಿನಕಾಯಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ದೇವಸ್ಥಾನದ ಕಂಬಕ್ಕೆ ಭಾನುವಾರ ಕಟ್ಟಿ ಹಾಕಿದ ರೈತರು ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ವರ್ಷ ಮಳೆ ಇಲ್ಲದೇ ಮೆಣಸಿನಕಾಯಿ ಸರಿಯಾಗಿ ಬೆಳೆದಿಲ್ಲ. ಇಂಥ ಸಂದರ್ಭದಲ್ಲಿ ಬಂದಷ್ಟು ಫಸಲನ್ನು ಕಳ್ಳರು ಕದಿಯುತ್ತಿರುವುದನ್ನು ಕಂಡು ರೈತರು ರೊಚ್ಚಿಗೆದ್ದರು.
‘ಗ್ರಾಮದ ನಿವಾಸಿಗಳಾದ ಶಿವು ಮತ್ತು ಮಂಜುನಾಥ ಎಂಬವರು ರೈತರ ಹೊಲದಲ್ಲಿ ಬೆಳೆದಿರುವ ಮೆಣಸಿನಕಾಯಿ ಕದಿಯುತ್ತಿದ್ದರು’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳ್ಳರನ್ನು ಸಾಕ್ಷ್ಯ ಸಮೇತ ಹಿಡಿದ ರೈತರು ಅವರ ತಲೆ ಮೇಲೆ ಕಳ್ಳತನ ಮಾಡಿದ್ದ ಮೆಣಸಿನಕಾಯಿ ಗಂಟನ್ನು ಹೊರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದರು. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.