ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿಯಲ್ಲಿ ಗ್ರಾಮದಲ್ಲಿ ಅಕ್ರಮ ಮಧ್ಯಮಾರಾಟ ರಾಜರೋಷವಾಗಿ ನಡೆಯುತ್ತಿದ್ದೆ ಇದರಿಂದ ರೋಸಿಹೋದ ಗ್ರಾಮಸ್ಥರು ಅಕ್ರಮ ಮಧ್ಯಮಾರಾಟ ನಿಲ್ಲಿಸುವಂತೆ ಸದ್ಯ ಗ್ರಾಮದ ಎಲ್ಲೆಂದರಲ್ಲಿ ಗೋಡೆಗಳ ಮೇಲೆ ಅಕ್ರಮ ಮಧ್ಯ ಮಾರಾಟಗಾರರು ಕೂಡಲೇ ಮಧ್ಯ ಮಾರಾಟ ನಿಲ್ಲಸಬೇಕು ಇದು ನಿಮಗೆ ಕೊನೆಯ ಎಚ್ಚರಿಕೆ ಇಲ್ಲವಾದಲ್ಲ ಗ್ರಾಮದಿಂದ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಸಾರಾಯಿ ಮಾರಾಟ ಮಾಡುತ್ತಿರುವವರ ಹೆಸರಿನೊಂದಿಗೆ ಗ್ರಾಮದ ತುಂಬ ಭಿತ್ತಿಪತ್ರಗಳು ಗೋಡೆ ಗೋಡೆ ಅಂಟಿಸಿದ್ದಾರೆ .
ಅಕ್ರಮ ಮಧ್ಯ ಮಾರಾಟ ತಡೆಗಟ್ಟುವ ಕುರಿತು ಸಾಕಷ್ಟು ಬಾರಿ ಅಬಕಾರಿ ಇಲಾಖೆಗೆ ಅಕ್ರಮ ಮಧ್ಯ ಮಾರಾಟ ತಡೆಗಟ್ಟಲು ಮನವಿ ಮಾಡಿದರು ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.