ಗದಗ: ನ.24 ರಿಂದ ಡಿ. 3ರ ವರೆಗೆ ಗದಗನಲ್ಲಿ ಕೊಪ್ಪಳದ ಅಭಿನವ ಗವಿಸಿಧ್ದೇಶ್ವರ ಸ್ವಾಮೀಜಿಗಳಿಂದ ಪ್ರತಿನಿತ್ಯ ಸಂಜೆ 6 ರಿಂದ 7 ಘಂಟೆಯವರೆಗೆ ಆಧ್ಯಾತ್ಮ ಪ್ರವಚನ ಆಯೋಜಿಸಲಾಗಿದೆ ಎಂದು ನಗರದ ಪತ್ರಿಕಾಭವನದಲ್ಲಿ ಮಾಜಿ ಶಾಸಕ ಡಿ ಆರ್ ಪಾಟೀಲ ಹೇಳಿದರು. ನಗರದ ವಿದ್ಯಾದಾನ ಸಮಿತಿ ಶಾಲೆ ಮೈದಾನದಲ್ಲಿ ಪ್ರವಚನ ಆಯೋಜನೆ ಮಾಡಲಾಗಿದೆ.
ಆಧ್ಯಾತ್ಮ ಪ್ರವಚನ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ವಿವಿಧ ಮಠಾಧಿಶರ ಸಾನಿಧ್ಯ ವಹಿಸುವವರು ಜೊತೆಗೆ ಗದಗ ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮೀಣ ಭಾಗಗಳಲ್ಲಿ ಸದ್ಭಾವನಾ ಪಾದಯಾತ್ರೆ ಜರುಗುವುದು ಎಂದು ಹೇಳಿದರು.