ಮಧ್ಯಾಹ್ನವಾದರು ಕೆಲಸಕ್ಕೆ ಬಾರದ ಉಪತಹಶೀಲ್ದಾರ ಕಚೇರಿ ಸಿಬ್ಬಂದಿ ಸಾರ್ವಜನಿಕರ ಅಲೆದಾಟ ಕೆಲಸಕ್ಕೆ ಬಾರದ ಸಿಬ್ಬಂದಿಗಳ ವಿರುದ್ಧ ಆಕ್ರೋಶ

graochandan1@gmail.com
1 Min Read

ನರೇಗಲ್:‌ ಪಟ್ಟಣದ ಉಪ ತಹಶೀಲ್ದಾರ ಕಚೇರಿಯ (ನಾಡ ಕಚೇರಿ) ಸಿಬ್ಬಂದಿಗಳು ಮಧ್ಯಾಹ್ನ ಒಂದು ಗಂಟೆಯಾದರು ಸಹ ಕೆಲಸಕ್ಕೆ ಬಾರದೆ ಕಚೇರಿಗೆ ಬೀಗ ಹಾಕಿರುವ ಕಾರಣದಿಂದ ಅಗತ್ಯ ದಾಖಲಾತಿಗಳನ್ನು ಪಡೆಯಲು ಹೋಬಳಿಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು ಆಕ್ರೋಶಗೊಂಡು ಉಪತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ಮಾಡಿರುವ ಘಟನೆ ಗುರುವಾರ ನಡೆದಿದೆ.

ಹೊಲದ ಉತರಾದಲ್ಲಿ ವಾರಸುದಾರರ ಮಾಹಿತಿ,ಆಧಾರ ಕಾರ್ಡ ತಿದ್ದುಪಡಿ,ಜಾತಿ ಆದಾಯ ಪ್ರಮಾಣ ಪತ್ರ  ಸೇರಿದಂತೆ ಸಾರ್ವಜನಿಕರಿಗೆ ಸೇರಿದ ಅಗತ್ಯ ಸೇವೆಗಾಗಿ ಕಚೇರಿ ಮುಂದೆ ಬೆಳಿಗ್ಗೆ 9 ಗಂಟೆಗೆ ಬಂದು ಕಾಯುತಿದ್ದರು ಆದರೆ ಮಧ್ಯಾಹ್ನವಾದರು ನಾಡ ಕಛೇರಿ ಸಿಬ್ಬಂದಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಯು ಬರಲೇ ಇಲ್ಲ ಎಂದು ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ಕಂದಾಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗೆ ನರೇಗಲ್‌ ನಾಡ ಕಚೇರಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೇಕಾಬಿಟ್ಟಿಯಾಗಿ ಬರುತ್ತಿದ್ದಾರೆ. ಹೀಗೆ ತೊಂದರೆಯನ್ನು ಅನುಭವಿಸುತ್ತಿರುವುದು ಎರಡನೇಬಾರಿಯಾಗಿದೆ. ಇದನ್ನು ಕಡಿವಾಣ ಹಾಕಲು ಮೇಲಾಧಿಕಾರಿಗಳು ಮುಂದಾಗಬೇಕು ಎಂದು ಸೂಡಿ ಗ್ರಾಮದ ರೈತ ಹನಮಂತ ಹೇಳಿದರು.

ಈ ಕುರಿತು ಪ್ರತಿಕ್ರಿಯೇ ನೀಡಿದ ನರೇಗಲ್‌ ನಾಡಕಚೇರಿಯ ಉಪತಹಶೀಲ್ದಾರ ಎಸ್. ಜಿ. ದೊಡ್ಡಮನಿ ಮಾತನಾಡಿ, ನರೇಗಲ್‌ ಸಿಬ್ಬಂದಿಗಳು ಮೀಟಿಂಗ್‌ ಗೆ ಹೋಗಿದ್ದಾರೆ. ಮರಳಿ ಬಂದು ಕಚೇರಿಯನ್ನು ಓಪನ್‌ ಮಾಡುತ್ತಾರೆ ಸದ್ಯ ಬೇರೆಯವರನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದರು ಆದರೆ ಈ ಬಗ್ಗೆ ತಹಶಿಲ್ದಾರ ಮಾತ್ರ ಎ.ಜೆ.ಎಸ್.‌ಕೆ ಸಿಬ್ಬಂದಿಗಳಿಗೆ ಮಾತ್ರ ಮೀಟಿಂಗ್‌ ಕರೆಯಲಾಗಿದೆ ಉಳಿದವರ ಬಗ್ಗೆ ಮಾಹಿತಿ ಪಡೆದುಕೊಳ್ಳುವೆ  ಎಂದು ಕಿರಣಕುಮಾರ ಜಿ. ಕುಲಕರ್ಣಿ ತಹಶೀಲ್ದಾರ ಹೇಳಿದರು.

- Advertisement -
Ad image

Share this Article