ಶಿರಹಟ್ಟಿ: ೬೮ ನೇಯ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಗಂಧದ ಗುಡಿ ಬಳಗ ಹಾಗೂ ಕರ್ನಾಟಕ ಪ್ರಜಾಪರ ವೇದಿಕೆ ವತಿಯಿಂದ ಶಿರಹಟ್ಟಿ ಪಟ್ಟಣದಲ್ಲಿರುವ ಶಿಕ್ಷಕರ ಸಮುಧಾಯ ಭವನದಲ್ಲಿ ಶಿರಹಟ್ಟಿ ಪಟ್ಟಣದ ಪೌರಕಾರ್ಮಿಕರಿಗೆ ಹಾಗೂ ಬಸ್ ನಿಲ್ದಾಣದ ಸ್ವಚ್ಛತಾ ಕಾರ್ಮಿಕರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಂಧದ ಗುಡಿ ಬಳಗದ ಗದಗ ಜಿಲ್ಲಾಧ್ಯಕ್ಷ ಹಸನ್, ಎನ್, ತಹಶೀಲ್ದಾರ ಮಾತನಾಡಿ ನಮ್ಮ ನಾಡು ಕನ್ನಡ ನಾಡು ಶ್ರೀಗಂಧದ ಬೀಡು ಕಲೆ ಸಾಹಿತ್ಯ ಸಂಸ್ಕೃತಿ ವಾಸ್ತುಶಿಲ್ಪಕ್ಕೆ ಹೆಸರಾದ ನಾಡು ಇಂತಹ ಕನ್ನಡ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ಕನ್ನಡಿಗರ ಹಬ್ಬ ಕನ್ನಡ ರಾಜ್ಯೋತ್ಸವ ಆಗಿದೆ ಹಾಗೂ ಶಿರಹಟ್ಟಿ
ಪಟ್ಟಣದ ಪೌರಕಾರ್ಮಿಕರ ಹಾಗು ಬಸ್ ನಿಲ್ದಾಣದ ಸ್ವಚ್ಛತಾ ಕಾರ್ಮಿಕರ ಕಾರ್ಯ ನಿಜಕ್ಕೂ ಅನನ್ಯವಾದದು ಪಟ್ಟಣವನ್ನು ಸ್ವಚ್ಛತೆಯನ್ನಾಗಿ ಇಟ್ಟುಕೊಳ್ಳುವುದು ಪಟ್ಟಣದ ಪ್ರತಿಯೊಬ್ಬ ಪ್ರಜೆಗಳ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಅಜ್ಜಪ್ಪ ಬಿಡವೆ,ವಿಶ್ವನಾಥ ಕಾಂಬಳೆ,ಸತೀಶ ನರಗುಂದ,ಸುನೀಲ್ ಸರ್ಜಾಪೂರ,ಶಿವರಾಜ ದೋಟ್ಯಾಳ,ಸಮೀರ ಅತ್ತಾರ,ಅನೀಲ ಗುಡಿಮನಿ,ಅನ್ವರ ಬರದ್ವಾಡ,ಕಳಕಪ್ಪ ಬಿಸನಳ್ಳಿ, ಕರಿಯಪ್ಪ ಬಡೇನ್ನವರ ಸೇರಿದಂತೆ ಹಲವಾರು ಹಾಜರಿದ್ದರು.