ಗದಗ: ನಗರದಲ್ಲಿ ಭೀಷ್ಮಕೆರೆಯಲ್ಲಿ ಇಚೆಗೆ ನಡೆದ ಹಾಯಿ ದೋಣಿ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಸ್ ವ್ಹಿ ಸಂಕನೂರ ಅವರು ದಿನಾಂಕ ಅ ೨೧ ರಂದು ಸ್ಥಳೀಯವಾಗಿ ಲಭ್ಯರಿದ್ದರು ಆದರೆ ಶಾಸಕ ಎಸ್ ವ್ಹಿ ಸಂಕನೂರ ಅವರಿಗೆ ಪ್ರವಾಸೋದ್ಯಮ ಇಲಾಖೆಯ ಸಹಾಯ ನಿರ್ದೇಶಕ ಕೊಟ್ರೇಶ್ವರ ವಿಭೂತಿ ಖುದ್ದಾಗಿ ಭೇಟಿ ನೀಡಿ, ಅಥವಾ ಕರೆಮಾಡಿ ಆಮಂತ್ರಣ ನೀಡಲ್ಲ ಇದರಿಂದ ನನಗೆ ಅವಮಾನ ಮತ್ತು ನನ್ನ ಹಕ್ಕು ಚ್ಯುತಿ ಆಗಿದೆ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರು ದೂರಿನ ಮೇರೆಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಕೊಟ್ರೇಶ್ವರ ವಿಭೂತಿ ಅವರಿಗೆ ಕಾರಣ ಕೇಳಿ ನೋಟೀಸ್ ನೀಡಿ 3 ದಿನಗಳ ಒಳಗೆ ಉತ್ತರ ನೀಡುವಂತೆ ಆದೇಶಿಸಿದ್ದಾರೆ.

ಡಿಸಿ ನೋಟಿಸನಲ್ಲಿ ಏನಿದೆ:
ಶಾಸಕ ಎಸ್.ವ್ಹಿ ಸಂಕನೂರು ಅವರ ಹಕ್ಕು ಚ್ಯುತಿ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ ಈ ಹಿನ್ನೆಲೆ ನಿಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಜರುಗಿಸಬಾರದು? ಈ ಬಗ್ಗೆ ನೋಟೀಸ್ ನೀಡಿದ ಮೂರು ದಿನಗಳ ಒಳಗೆ ಲಿಖಿತ ರೂಪದಲ್ಲಿ ಕಾರ್ಯಾಲಯಕ್ಕೆ ಸಲ್ಲಿಸಲು ಜಿಲ್ಲಾಧಿಕಾರಿ ನೋಟೀಸ್ ನೀಡಿದ್ದಾರೆ.
ಏನಿದೆ ದೂರಿನಲ್ಲಿ ?
ಅ.21ಭೀಷ್ಮ ಕರೆಯಲ್ಲಿ ನಡೆದ ನಡೆದ ಹಾಯಿ ದೋಣಿ ಕಾರ್ಯಕ್ರಮದಲ್ಲಿ ಎಸ್.ವಿ. ಸಂಕನೂರು ಅವರು ಭಾಗವಹಿಸಲು ಕೋರಿ ಶಾಸಕ ಎಸ್.ವ್ಹಿ. ಸಂಕನೂರು ಪ್ರವಾಸದ ಸಂದರ್ಭದಲ್ಲಿ ಅವರ ಮನೆಗೆ ಅ 20 ರಂದು ಆಮಂತ್ರಣ ಪತ್ರಿಕೆ ತಲುಪಿಸಲಾಗಿದೆ. ಆದರೆ ಖುದ್ದಾಗಿ ಭೇಟಿ ನೀಡಿ ಅಥವಾ ಕರೆ ಮಾಡಿ ಆಪ್ತ ಸಹಾಯಕನಿಗೂ ಆಮಂತ್ರಿಸದ ಕಾರಣ, ನಗರದಲ್ಲಿ ಅ 21ರಂದು ನಾನು ಲಭ್ಯ ಇದ್ದರೂ ಕೂಡ ಭೀಷ್ಮ ಕರೆಯಲ್ಲಿ ನಡೆದ ಹಾಯಿ ದೋಣಿ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಲು ನಂಗೆ ಕುದ್ದಾಗಿ ಆಮಂತ್ರಣ ನೀಡದ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯ ನಿರ್ದೇಶಕ ಕೊಟ್ರೇಶ್ವರ ವಿಭೂತಿ ವಿರುದ್ಧ ಶಾಸಕ ಎಸ್ ವ್ಹಿ ಸಂಕನೂರ ಅವಮಾನವಾಗಿದೆ ಹಕ್ಕುಚ್ಯೂತಿಯಾಗಿದೆ ಸಂಭಂದಿಸಿದ ಅಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೆ ಪತ್ರ ಬರೆದಿದ್ದರು.
ಈ ಪ್ರಕಾರ ಇಂದು ಜಿಲ್ಲಾಧಿಕಾರಿ ಹಕ್ಕುಚ್ಯುತಿ ಪ್ರಕರಣ ಕಾರಣ ಕೇಳಿ ಕೊಟ್ರೇಶ್ವರ ವಿಭೂತಿಗೆ ಡಿಸಿ ನೋಟೀಸ್ ಜಾರಿ ಮಾಡಿದ್ದಾರೆ.

