ಬೆಂಗಳೂರು: ಸೋಮವಾರ ಬೆಳ್ಳಂಬೆಳಗ್ಗೆಯೇ ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದು, ದಾಳಿ ವೇಳೆ ಅಪಾರ ಪ್ರಮಾಣದ ನಗದು, ಚಿನ್ನಾಭರಣಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.
ರಾಜ್ಯದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 17 ಸರ್ಕಾರಿ ಅಧಿಕಾರಿಗಳ ಕಚೇರಿ, ನಿವಾಸ ಸೇರಿದಂತೆ 70ಕ್ಕೂ ಹೆಚ್ಚು ಕಡೆ ಆಯಾ ನ್ಯಾಯಾಂಗ ವ್ಯಾಪ್ತಿಯ ಪೊಲೀಸರ ನೆರವಿನೊಂದಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಅಪಾರ ಪ್ರಮಾಣದ ನಗದು, ಚಿನ್ನ, ಸ್ಥಿರಾಸ್ತಿ, ಐಷಾರಾಮಿ ವಾಹನಗಳು, ಭೂಮಿ ಮೇಲಿನ ಹೂಡಿಕೆ, ಷೇರುಗಳು ಮತ್ತು ದುಬಾರಿ ಗ್ಯಾಜೆಟ್‌ಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಬೆಂಗಳೂರು, ಮಂಡ್ಯ, ರಾಯಚೂರು, ಬೀದರ್, ಕಲಬುರಗಿ, ಚಿತ್ರದುರ್ಗ, ಬಳ್ಳಾರಿ, ತುಮಕೂರು, ಉಡುಪಿ, ಹಾಸನ, ಬೆಳಗಾವಿ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಹೇಳಿದೆ.
17 ಮಂದಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ, ಪರಿಶೀಲನೆ ಹಾಗೂ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಲೋಕಾಯುಕ್ತ) ಡಾ ಎ ಸುಬ್ರಹ್ಮಣ್ಯೇಶ್ವರ ಅವರು ಮಾಹಿತಿ ನೀಡಿದ್ದಾರೆ.
ಯಾವ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ?
೧.ಮಂಜುನಾಥ್, ರೆವೆನ್ಯೂ ಇನ್‌ಸ್ಪೆಕ್ಟರ್ (ಬಳ್ಳಾರಿ),
೨.ನಾಗೇಂದ್ರಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ೩)ಶಿರಾದ ಸಹಾಯಕ ಎಂಜಿನಿಯರ್ (ತುಮಕೂರು)
೪)ಶರಣಬಸವ ಪಟ್ಟೆದ್, ಕ್ಯಾಶ್ಯುಟೆಕ್ ಅಧಿಕಾರಿ (ರಾಯಚೂರು)
೫)ಬಾಲರಾಜು, ಕೊಳಚೆ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಎಂಜಿನಿಯರ್ (ಮಂಡ್ಯ)
೬)ಶಶಿಕುಮಾರ್, ಕೆಐಎಡಿಬಿ ಎಂಜಿನಿಯರ್ (ಮಂಡ್ಯ)೭)ರಾಣೆಬೆನ್ನೂರಿನ ವಲಯ ಅರಣ್ಯಾಧಿಕಾರಿ ಮಹಾಂತೇಶ್ ಅವರ ಪತ್ನಿ ಹೇಮಾವತಿ (ವಿಜಯನಗರ ಜಿಲ್ಲೆ)೮)ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ (ಚಿತ್ರದುರ್ಗ)
೯)ನಾಗೇಂದ್ರ ನಾಯ್ಕ್, ಸಹಾಯಕ ಅರಣ್ಯ ಅಧಿಕಾರಿ (ಚಿತ್ರದುರ್ಗ)
೧೦)ಎಂ.ಎಸ್.ಬಿರಾದಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಬೆಳಗಾವಿ)
೧೧)ಅಪ್ಪಾಸಾಬ್ ಕಾಂಬಳೆ, ನಗರ ಹಾಗೂ ಗ್ರಾಮೀಣ ಯೋಜನಾ ಜಂಟಿ ನಿರ್ದೇಶಕ (ಕಲಬುರಗಿ)
೧೨)ತಿಪ್ಪಣ್ಣಗೌಡ, ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್ಎಲ್-ಭೀಮರಾಯನಗುಡಿ)ದ ಕಾರ್ಯಪಾಲಕ ಎಂಜಿನಿಯರ್ (ಕಲಬುರಗಿ)
೧೩)ಬಸವರಾಜ, ವಲಯ ಅರಣ್ಯಾಧಿಕಾರಿ (ಬೀದರ್)
೧೪)ಎ.ಎಸ್. ಕಾಂಬಳೆ, ನಗರ ಯೋಜನಾ ಶಾಖೆಯ ಜಂಟಿ ನಿರ್ದೇಶಕ (ಬೆಳಗಾವಿ)
೧೫)ಶ್ರೀನಿವಾಸ್, ನಗರ ಹಾಗೂ ಸತ್ತೇಗಾಲ ಗ್ರಾಮದಲ್ಲಿರುವ ಬೆಂಗಳೂರಿನ ಕಾರ್ಮಿಕ ಇಲಾಖೆಯ ಉಪನಿರ್ದೇಶಕ (ಚಾಮರಾಜನಗರ)
೧೬)ಎಚ್.ಇ.ನಾರಾಯಣ, ಕೆಪಿಟಿಸಿಎಲ್ ಜೂನಿಯರ್ ಎಂಜಿನಿಯರ್ (ಹಾಸನ)
೧೭)ರಾಜೇಶ ಹಮ್ಮಣ್ಣ ನಾಯಕ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ (ಕಾರವಾರ)
೧೮)ಎಸ್. ಆರ್.ಶ್ರೀನಿವಾಸ್, ಬಾಯ್ಲರ್ಸ್ ಗಳ ಉಪ ನಿರ್ದೇಶಕಯ (ದಾವಣಗೆರೆ).