ಸಾಲ ಬಾದೆಯಿಂದ ಹರ್ಲಾಪುರ ಗ್ರಾಮದ  ಯುವ ರೈತ ಆತ್ಮಹತ್ಯೆ

ಸಮಗ್ರ ಪ್ರಭ ಸುದ್ದಿ
1 Min Read

ಗದಗ : ಮಳೆ ಕೈಕೊಟ್ಟಿದರಿಂದ ಸಾಲಕ್ಕೆ ಭಯಗೊಂಡು ತಾಲೂಕಿನ ಹರ್ಲಾಪುರ ಗ್ರಾಮದ ತನ್ನದೇ ಜಮೀನಿನಲ್ಲಿ ಇರುವ ಮರ ಒಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹರ್ಲಾಪೂರ ಗ್ರಾಮದ ಯುವ ರೈತ ಪರಸಪ್ಪ ರಾಮಪ್ಪ ಉಮಚಗಿ( 26) ಶುಕ್ರವಾರ ಬೆಳಗಿನ ಜಾವಾ ನೆಣಿಗೆ ಶರಣಾದ ದುರ್ದೈವಿ.

ಮೃತ ರೈತನು ಇತ್ತಿಚೆಗೆ ಅವರ ತಂದೆ ಮಾಡಿದ್ದ 1,20 ಸಾವಿರ ರೂ.ಹಣ ಬ್ಯಾಂಕಗೆ ಜಮಾ ಮಾಡಿ ಸಾಲ ತೀರಿಸಿದ್ದಾನೆ.ಬ್ಯಾಂಕನವರು ಮರಳಿ ಸಾಲ ನೀಡಿಲಿಲ್ಲ ಹಾಗೂ ಮರಳಿ ರೈತ 2 ಎಕರೆ ಜಮೀನದಲ್ಲಿ ಬಿತ್ತಿದ ಮೆಣಸಿನಕಾಯಿ, ಈರುಳ್ಳಿ ಬೆಳೆ ಮಳೆ ಇಲ್ಲದೆ ಒಣಗವೆ.ಕೈಗಡ ಸಾಲ ಮತ್ತು ಗುಂಪುಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾನೆ. ಮಳೆ ಇಲ್ಲ, ಬೆಳೆ ಇಲ್ಲ, ಬ್ಯಾಂಕದಿಂದ ಸಾಲ ಸಿಕ್ಕಿಲ್ಲ, ಇತ್ತಿಚಿಗೆ ಅವರ ತಂದೆಯೂ ತೀರಿಕೊಂಡಿದ್ದರಿಂದ ಗುಂಪು ಸಾಲ ಮರಳಿಸಲು ಸಾಧ್ಯವಾಗದೆ, ಯಾವುದೇ ದಿಕ್ಕು ತೋಚದೆ ರೈತ ಪರಸಪ್ಪ ಉಮಚಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Share this Article