ಗದಗ:ನಿರಂತರ 10 ತಾಸು ರೈತರ ಪಂಪಸೆಟ್ಗೆ ಸಮರ್ಪಕ ವಿದ್ಯುತ್ ಸರಬರಾಜುಗೆ ಆಗ್ರಹಿಸಿ ಇಂದು ರೈತ ಸಂಘಟನೆ ಸದಸ್ಯರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಬಾರಿ ಮುಂಗಾರು ಮಳೆ ಕೈಕೊಟ್ಟದ ಪರಿಣಾಮ ರಾಜ್ಯದಾದ್ಯಂತ ಬರಗಾಲ ಆವರಿಸಿದೆ ಮಳೆಯನ್ನೇ ನಂಬಿ ಬಿತ್ತನೆ ಮಾಡಿದ ಬೆಳೆ ಸಂಪೂರ್ಣ ಹಾಳಾಗಿದೆ
ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆ ಉಳಿಸಿಕೊಳ್ಳಲು ರೈತರು ಪರದಾಟ ನಡೆಸಿದ್ದಾರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಕೈಗಾರಿಕೆಗಳಿಗೆ 24 ಗಂಟೆ ವಿದ್ಯುತ್ ನೀಡುತ್ತಾರೆ ಆದರೆ ರೈತರ ಪಂಪಸೆಟ್ ಗಳಿಗೆ ನಿರಂತರ 10 ತಾಸು ವಿದ್ಯುತ್ ನೀಡುತ್ತಿಲ್ಲ ರಾತ್ರಿ ವೇಳೆ 5 ತಾಸು ವಿದ್ಯುತ್ ನೀಡುತ್ತಿದ್ದಾರೆ ರಾತ್ರಿ ವಿದ್ಯುತ್ ಪೂರೈಕೆ ಮಾಡುವುದರಿಂದ ರೈತರಿಗೆ ತೊಂದರೆ ಆಗಿದೆ ಸರ್ಕಾರ ರೈತರ ಪ್ರಾಣದ ಜೊತೆಗೆ ಚಲ್ಲಾಟವಾಡುತ್ತಿದೆ ರೈತರ ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಿಲ್ಲ ಕೂಡಲೇ ರೈತರ ಸಮಸ್ಯೆ ಪರಿಸುವಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಿದ್ದಾರೆ.