ಗದಗ: ಗ್ರಾಮ ಪಂಚಾಯಿತಿಯೊಂದಕ್ಕೆ ಏಳು ಬಾಗಿಲು ಇವೆ. ಹೀಗೆ ಏಳು ಬಾಗಿಲು ಇದ್ರೆ ಅಪಶಕುನ, ಅಭಿವೃದ್ದಿಗೆ ತೊಂದರೆಯಾಗುತ್ತೆ ಅಂತ ಆಡಳಿತ ಮಂಡಳಿ ಹೆಚ್ಚುವರಿಯಾಗಿ ಎಂಟನೇ ಬಾಗಿಲು ತೆರೆದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಪಂಚಾಯತಿಯಲ್ಲಿ ನಡೆದಿದೆ.
ಎಂಟನೇ ಬಾಗಿಲು ತೆರೆಯುವ ವಿಚಾರವಾಗಿ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡಿ ಒಮ್ಮತದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಇನ್ನು ಈ ಬಗ್ಗೆ ಸಾರ್ವಜನಿಕರು ಕಿಡಿಕಾರಿದ್ದಾರೆ. ಇಂತಹ ಪದ್ಧತಿ ಮನೆಯಲ್ಲಿ ಓಕೆ, ಆದರೆ ಗ್ರಾಮ
ಪಂಚಾಯಿತಿಯಲ್ಲಿ ಯಾಕೆ ಅಂತಾ ಪ್ರಶ್ನಿಸಿದ್ದಾರೆ. ಸರ್ಕಾರದ ಹಣವನ್ನು ಬಡವರ ಬದಲಿಗೆ ಬೇಕಾಬಿಟ್ಟಿಯಾಗಿ ದುಂದುವೆಚ್ಚ ಮಾಡ್ತಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ.
ಇನ್ನು 15 ನೇ ಹಣಕಾಸು ಯೋಜನೆಯಲ್ಲಿ 99 ಸಾವಿರ ರೂ, ಖರ್ಚು ಮಾಡಿ ಬಾಗಿಲು ನಿರ್ಮಾಣ ಮಾಡಲಾಗಿದೆ. ಚೆನ್ನಾಗಿದ್ದ ಗೋಡೆ ಒಡೆದು ಹಾಕಿ ಬಾಗಿಲು ನಿರ್ಮಾಣ ಮಾಡಲಾಗಿದೆ. ಸರ್ಕಾರದ ಹಣ ಬಡವರ ಬದಲಿಗೆ ಬೇಕಾಬಿಟ್ಟಿಯಾಗಿ ದುಂದುವೆಚ್ಚ ಮಾಡ್ತಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ.