ಗದಗ: ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಕೆರೆಯಲ್ಲಿ ನೀರು ತುಂಬುವಾಗ ಕಾಲು ಜಾರಿ ಮುಳುಗಿ ಬಾಲಕಿ ಸಾವನ್ನಪ್ಪಿದ್ದಾಳೆ ಗ್ರಾಮ ಪಂಚಾಯಿತಿ ಮುಂದೆ ಬಾಲಕಿ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಭುವನೇಶ್ವರಿ ಛಟ್ರಿ (14) ಮೃತ ಬಾಲಕಿಯಾಗಿದ್ದು, ಕೆರೆ ಸುತ್ತ ಸಂಪೂರ್ಣವಾಗಿ ತಂತಿ ಬೇಲಿ ನಿರ್ಮಿಸಿಲ್ಲ, ಜೊತೆಗೆ ಮೆಟ್ಟಿಲು ನಿರ್ಮಾಣ ಮಾಡಿಲ್ಲ ಈ ಹಿಂದೆ ಮೆಟ್ಟುಲು ನಿರ್ಮಾಣಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದರು ಆದರೂ ಬಳಗಾನೂರ ಗ್ರಾಮ ಪಂಚಾಯತ ಅಧಿಕಾರಿಗಳು ಮತ್ತು ಸದಸ್ಯರು ನಿರ್ಲಕ್ಷ್ಯ ತೋರಿದ್ದಾರೆ ಇವರ ಈ ನಿರ್ಲಕ್ಷ್ಯದಿಂದ ಇಂದು ಬಾಲಕಿ ಸಾವನ್ನಪ್ಪಿದ್ದಾಳೆ ಹೀಗಾಗಿ ದುರ್ಘಟನೆ ಗ್ರಾಮ ಪಂಚಾಯಿತಿ ನೇರ ಹೊಣೆ ಅಂತ ಆರೋಪ ಮಾಡಿದ್ದಾರೆ.
ಗದಗ ಗ್ರಾಮಾಂತರ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.