ಗದಗ : ಅಕ್ರಮವಾಗಿ ಅನ್ನಭಾಗ್ಯ ಯೋಜನೆ ನೀಡುವ ಅಕ್ಕಿ ಸಂಗ್ರಹ ಮಾಡಿದ ಮನೆ ಮೇಲೆ ತಡ ರಾತ್ರಿ ಮುಂಡರಗಿ ತಹಶೀಲ್ದಾರ ಧನಂಜಯ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ಸುಮಾರು 1ಲಕ್ಷ 32 ಸಾವಿರಾರು ಮೌಲ್ಯದ 80 ಬ್ಯಾಗನಲ್ಲಿದ್ದ 39 ಕ್ವಿಂಟಾಲ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಗದಗ ಜಿಲ್ಲೆ ಮುಂಡರಗಿ ಪಟ್ಟಣದ ವಿರೇಶ ಬಡಿಗೇರ ಹಾಗೂ ಶಿವಾನಂದ ಬಡಿಗೇರ ಎಂಬುವರು ಮನೆಯಲ್ಲಿ ಅನ್ನಭಾಗ್ಯ ಅಕ್ಕಿ ಸಂಗ್ರಹದ ಖಚಿತ ಮಾಹಿತಿ ಮೇರೆಗೆ ಪೋಲಿಸ್ ಸಿಬ್ಬಂದಿ ಮತ್ತು ಆಹಾರ ಅಧಿಕಾರಗಳೊಂದಿಗೆ ತಹಶೀಲ್ದಾರ ಧನಂಜಯ ದಾಳಿ ನಡೆಸಿದ್ದಾರೆ.
ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಮಾರಾಟ ಮಾಡುವ ಉದ್ದೇಶ ದಿಂದ ಪಡಿತರ ಅಕ್ಕಿ ಸಂಗ್ರಹ ಮಾಡಿದ್ದರು ಎನ್ನಲಾಗಿದೆ ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.