ಕೇಂದ್ರ ಸರ್ಕಾರಕ್ಕೆ 4,860 ಕೋಟಿ ರೂ. ಬೆಳೆ ಪರಿಹಾರ ಕೇಳಿದ್ದೇವೆ : ಸಿಎಂ ಸಿದ್ದರಾಮಯ್ಯ

ಸಮಗ್ರ ಪ್ರಭ ಸುದ್ದಿ
1 Min Read

ಚಿತ್ರದುರ್ಗ: ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ರೈತರಿಗೆ ಕೃಷಿ ಕೆಲಸಗಳಿಗೆ, ಜನರಿಗೆ ತೊಂದರೆಯಾಗಿದೆ. ಕಾವೇರಿ ಜಲಾಶಯಗಳಲ್ಲಿ ಕೂಡ ನೀರಿಲ್ಲ, ನಾರಾಯಣಪುರ, ಭದ್ರಾ ಮೇಲ್ದಂಡೆ ಯೋಜನೆ ಬಿಟ್ಟರೆ ಬೇರೆ ಎಲ್ಲಾ ಜಲಾಶಯಗಳಲ್ಲಿಯೂ ನೀರಿನ ಕೊರತೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಶುಕ್ರವಾರ ಚಿತ್ರದುರ್ಗದಲ್ಲಿ ಹೇಳಿದರು.

ಮಾರ್ಗಸೂಚಿ ಪ್ರಕಾರ ರಾಜ್ಯಕ್ಕೆ 4,860 ಕೋಟಿ ರೂಪಾಯಿ ಪರಿಹಾರ ಧನ ನೀಡಬೇಕೆಂದು ನಾವು ಕೇಂದ್ರ ಸರ್ಕಾರದಿಂದ ಕೇಳಿದ್ದೇವೆ. ಈ ಬಾರಿ ಒಂದು ರೀತಿ ಹಸಿರು ಬರ ರಾಜ್ಯಕ್ಕೆ ಬಂದಿದೆ. ಕೇಂದ್ರ ಸರ್ಕಾರಕ್ಕೆ ರಾಜ್ಯದ ವಸ್ತುಸ್ಥಿತಿಯನ್ನು ತಿಳಿಸಿದ್ದೇವೆ. ಕೇಂದ್ರದ ಅಧ್ಯಯನ ತಂಡ ಒಂದೊಂದು ತಂಡದಲ್ಲಿ ಮೂವರಂತೆ ರಾಜ್ಯದ 11 ಜಿಲ್ಲೆಗಳಿಗೆ ಹೋಗಿ ಅಧ್ಯಯನ ಮಾಡಲಿದ್ದು, ವಸ್ತುಸ್ಥಿತಿ ನೋಡಿ ತೀರ್ಮಾನ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದೇವೆ ಎಂದರು.

ರಾಜ್ಯದಲ್ಲಿ ಬರ ಅಧ್ಯಯನ ಮಾಡಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಿದ್ದಾರೆ. ಅದರ ಅಧಾರದ ಮೇಲೆ ಕೇಂದ್ರ ಪರಿಹಾರ ಹಣ ಬಿಡುಗಡೆ ಮಾಡಲಿದೆ. ವಾಸ್ತವಿಕವಾಗಿ ರಾಜ್ಯದಲ್ಲಿ ಈ ವರ್ಷ 30 ಸಾವಿರ ಚಿಲ್ಲರೆ ಕೋಟಿಯಷ್ಟು ಬರದಿಂದ ನಷ್ಟವಾಗಿದೆ. ಆದರೆ ಮಾರ್ಗಸೂಚಿ ಪ್ರಕಾರ 4,860 ಕೋಟಿ ರೂಪಾಯಿ ಕೇಳಿದ್ದೇವೆ.

Share this Article