ಗದಗ: ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಇಂದು ಬರ ಅಧ್ಯಯನ ಆರಂಭ ಮಾಡಿದ ಕೇಂದ್ರ ತಂಡದ ಮುಂದೆ ರೈತ ಜಮೀನಿನಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಹೆಸರು,ಗೋವಿನಜೋಳ, ಮೆಣಸಿನಕಾಯಿ ಸೇರಿದಂತೆ ಬಹುತೇಕ ಎಲ್ಲ ಬೆಳಗಳು ರೈತರ ಕೈ ಸೇರಲಿಲ್ಲ ಈಗಾಗಲೇ ಬರ ಆವರಿಸಿದೆ ಇನ್ನೂ ಮುಂದೆ ಜಾನುವಾರು ಸಾಕಾಣಿಕೆ,ಮೇವು ಸೇರಿದಂತೆ ಕುಡಿಯುವ ನೀರು,ಕೆಲಸ,ಬೆಳೆನಾಶ,ಸಾಲ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳನ್ನು ಸ್ವತಃ ರೈತರಿಂದ ಸಮಸ್ಯೆ ಆಲಿಸಿದ ಕೇಂದ್ರ ಬರ ಅಧ್ಯಯನ ತಂಡ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಗೋಜನೂರು ಗ್ರಾಮದ ಜಮೀನಿನಲ್ಲಿ ಹಾನಿಯಾಗಿರುವ ಗೋವಿನಜೋಳ ವೀಕ್ಷಣೆ ಮಾಡಿದರು.
ಶಿರಹಟ್ಟಿ ತಾಲೂಕಿನ ವಡವಿಹೊಸೂರ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಮೆಣಸಿನಕಾಯಿ ಬೆಳೆ ವೀಕ್ಷಣೆ ಮಾಡಿದರು ಈ ಸಮಯದಲ್ಲಿ ಬೆಳೆ ವಿಮಾ ಕಂಪನಿ ವಿರುಧ್ಧ ರೈತರು ಕೇಂದ್ರ ತಂಡದ ಎದುರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಗ್ರಾಮ ಪಂ. ವ್ಯಾಪ್ತಿಯಲ್ಲಿ ಬೆಳೆ ವಿಮಾ ಕಂಪನಿ ವಿಸಿಟ್ ಮಾಡಿಸಿದ್ದೀರಾ..? ಅಂತಾ ಡಿಸಿಗೆ ಮುಂದೆ ಅಳಲು ತೊಡಿಕೊಂಡರು.
ಗ್ರಾಮದಲ್ಲಿ ಒಂದೇ ಒಂದು ಕಾಳು ಬೆಳೆದಿಲ್ಲ, 80% ಇಳುವರಿ ಇದೆ ಅಂತಾ ಬೆಳೆ ವಿಮಾ ಕಂಪನಿ ಹಾಗೂ ಎಡಿ ರಿಪೋರ್ಟ ಕೊಟ್ಟಿದ್ದಾರೆ ಅಂತಾ ಆಕ್ರೋಶ ಆಕ್ರೋಶ ವ್ಯಕ್ತಪಡಿಸಿದರು.
ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಮಳೆ ಕೊರತೆ, ಬೆಳೆ ನಷ್ಟ ಹಿನ್ನೆಲೆ ಶಿರಹಟ್ಟಿ ತಾಲೂಕಿನ ಚಿಕ್ಕಸವಣೂರು ಗ್ರಾಮದ ಜಮೀನುಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿನೀಡಿ ಜಮೀನುಗಳಲ್ಲಿ ಬರ ಅಧ್ಯಯನ ಮಾಡಿ ರೈತರೊಂದಿಗೆ ಬರದ ಕುರಿತು ಚರ್ಚೆಮಾಡಿದರು ಬೆಳೆ ಹಾಳಾಗಿರೋದನ್ನ ಸ್ವತಃ ವೀಕ್ಷಿಸಿದ ಕೇಂದ್ರ ತಂಡ.
ಕಳೆದ ಮೂರು ವರ್ಷದಿಂದ ಬೆಳೆ ವಿಮೆ ಕೂಡಾ ಬಂದಿಲ್ಲ
ಈ ಬಾರಿ ಮುಂಗಾರು ಕೈ ಹಿಡಿಯಲಿಲ್ಲ ಹಿಂಗಾರು ಕೈ ಕೊಟ್ಟಿದೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ ನಮಗೆ ಪರಿಹಾರ ಒದಗಿಸಿ ಅಂತಾ ಕೇಂದ್ರ ಬರ ಅಧ್ಯಯನ ತಂಡದ ಮುಂದೆ ತಮ್ಮ ಅಳಲನ್ನ ತೊಡಿಕೊಂಡರು.
ತಂಡದ ಮುಖ್ಯಸ್ಥರಾಗಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಹೆಚ್ಚುವರಿ ಸಲಹೆಗಾರರಾದ ಡಿ.ರಾಜಶೇಖರ ಕೇಂದ್ರ ಪಶುಸಂಗೋಪನಾ ಇಲಾಖೆ ನಿರ್ದೇಶಕ ವ್ಹಿ.ಆರ್. ಠಾಕ್ರೆ ,ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿ ರಾಮ,
ಕಂದಾಯ ಇಲಾಖೆಯ ರಾಜ್ಯ ವಿಪತ್ತು ನಿರ್ವಹಣೆಯ ನಿರ್ದೇಶಕರಾದ ಕರೀಗೌಡ ತಂಡ ದಿಂದ ಅಧ್ಯಯನ ನಡೆಸಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ,ತಹಶಿಲ್ದಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.