ಬೆಂಗಳೂರು : LPG ಉಜ್ವಲ ಸಿಲಿಂಡರ್ ಬಳಕೆದಾರರಿಗೆ ಗುಡ್ನ್ಯೂಸ್ ಸಿಕ್ಕಿದೆ. ಕೇಂದ್ರ ಸರ್ಕಾರ ಉಜ್ವಲ ಯೋಜನೆಯ ಸಿಲಿಂಡರ್ ಬೆಲೆ ಇಳಿಸಿದೆ. ಮತ್ತೆ 100 ರೂಪಾಯಿ ಇಳಿಕೆಗೆ ಕ್ಯಾಬಿನೆಟ್ ನಿರ್ಧಾರ ಮಾಡಿದ್ದು, ಉಜ್ವಲ ಯೋಜನೆಯ ಪ್ರತಿ ಸಿಲಿಂಡರ್ 600 ರೂ.ಗೆ ಲಭ್ಯವಾಗಲಿದೆ. ಉಜ್ವಲ ಯೋಜನೆಯ ಸಿಲಿಂಡರ್ ಬಡ ಮಹಿಳೆಯರಿಗೆ ನೀಡಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸಂಪುಟ ಸಭೆ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.